

ಗುರುಪುರ: ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬದ ಪ್ರಯುಕ್ತ ಸೇವಾ ಸಪ್ತಾಹದ ಅಂಗವಾಗಿ ಬಿಜೆಪಿ ಮಂಗಳೂರು ಉತ್ತರ ಮಂಡಲದ ಎಸ್‌ಸಿ ಮೋರ್ಚಾ ವತಿಯಿಂದ ವಾಮಂಜೂರು ಪಚ್ಚನಾಡಿಯ ‘ಸ್ನೇಹ ದೀಪ’ ಆಶ್ರಮದ ಮಕ್ಕಳಿಗೆ ರಾತ್ರಿ ಭೋಜನ, ಹಣ್ಣು-ಹಂಪಲು ವಿತರಿಸಲಾಯಿತು.
ಮನಪಾ ಮೇಯರ್ ಮನೋಜ್ ಕುಮಾರ್ ಕೋಡಿಕಲ್, ಮಂಡಲ ಅಧ್ಯಕ್ಷ ಹರೀಶ್ ಪಣಂಬೂರು, ದ.ಕ. ಜಿಲ್ಲಾ ಎಸ್‌ಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಉಮೇಶ್ ಕೋಟ್ಯಾನ್ ವಾಮಂಜೂರು, ಮಂಡಲ ಪ್ರಧಾನ ಕಾರ್ಯದರ್ಶಿ ವನಿತಾ ಎಸ್., ಜಿಲ್ಲಾ ಕಾರ್ಯದರ್ಶಿ ವಿನಯ ಸಾಲ್ಯಾನ್, ಜಿಲ್ಲಾ ಉಪಾಧ್ಯಕ್ಷ ಸದಾಶಿವ ನೆಲ್ಲಿಕಾರ, ಅಲ್ಪಸಂಖ್ಯಾತ ಮೋರ್ಚಾ ಜಿಲ್ಲಾ ಪ್ರಭಾರಿ ಸಲ್ಡಾನ, ಆಶ್ರಮದ ಉಸ್ತುವಾರಿ ತಬಸು, ಜಿಲ್ಲಾ ಅಲ್ಪಸಂಖ್ಯಾತ ಮೋರ್ಚಾ ಪ್ರೇಮ್ ಕುಮಾರ್, ಮಂಡಲ ಎಸ್‌ಸಿ ಮೋರ್ಚಾ ಉಪಾಧ್ಯಕ್ಷ ವಾಸುದೇವ ಕೃಷ್ಣಾಪುರ, ಶೇಖರ್ ಕೊಂಚಾಡಿ, ತಿರುಮಲೇಶ್, ಮಂಡಲ ಎಸ್‌ಸಿ ಮೋರ್ಚಾ ಕಾರ್ಯದರ್ಶಿ ರೋಶನ್, ಶಾಂತಕುಮಾರ್, ರೂಪಾ ಶೆಟ್ಟಿ, ಅಖಿಲಾ ಶೆಟ್ಟಿ, ಸೋಮನಾಥ ಉಪಸ್ಥಿತರಿದ್ದರು.