

ಗುರುಪುರ: ಬಡಗ ಎಡಪದವು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಂಗಾರಗುಡ್ಡೆಯ ಮನೆಯಿಂದ ಕಾಣೆಯಾಗಿದ್ದ ಬಂಗಾರಗುಡ್ಡೆಯ ನಿವಾಸಿ ಪ್ರಕಾಶ್ ಕುಮಾರ್(62) ಎಂಬುವರ ಮೃತದೇಹ ಮನೆ ಸಮೀಪದ ಬಾವಿಯಲ್ಲಿ ಗುರುವಾರ ಪತ್ತೆಯಾಗಿದೆ. ಅವರು ನಾಪತ್ತೆಯಾದ ಬಗ್ಗೆ ಬುಧವಾರ ವಾಟ್ಸಾೃಪ್ ಸಂದೇಶ ರವಾನಿಸಲಾಗಿತ್ತು. ಆಯತಪ್ಪಿ ಬಾವಿಗೆ ಬಿದ್ದಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕಾಗಮಿಸಿದ ಬಜ್ಪೆ ಪೊಲೀಸರು ಶವದ ಮಹಜರು ನಡೆಸಿ ಮರಣೋತ್ತರ ಪರೀಕ್ಷೆಗೆ ಮೂಡುಬಿದಿರೆ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ.