

ಸುಬ್ರಹ್ಮಣ್ಯ: ಇಲ್ಲಿ ಸುಮಾರು 10ರಿಂದ 12 ವರ್ಷ ಕೂಲಿ ಮಾಡಿಕೊಂಡಿದ್ದ ವ್ಯಕ್ತಿಯೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ಮೃತಪಟ್ಟಿದ್ದು, ಸುಬ್ರಹ್ಮಣ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇತ್ತೀಚೆಗಷ್ಟೆ ಅಸೌಖ್ಯಗೊಂಡು ವನದುರ್ಗಾ ದೇವಳ ಮುಂಭಾಗ ಮಲಗಿದ್ದ ಇವರನ್ನು ಸ್ಥಳೀಯರ ಸಹಕಾರದಿಂದ ಪುತ್ತೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮೃತರು ಕುಂದಾಪುರ ಮೂಲದವರೆಂದು ಹೇಳಿಕೊಂಡಿದ್ದು, ಚಂದ್ರ ಎಂಬ ಹೆಸರಿನಲ್ಲಿ ಸುಬ್ರಹ್ಮಣ್ಯ ಪರಿಸರದಲ್ಲಿ ಕೂಲಿ ಕಾರ್ಮಿಕರಾಗಿದ್ದರು. ಸುಬ್ರಹ್ಮಣ್ಯ ಪೊಲೀಸರು ಈ ಕುರಿತು ಪ್ರಕಟಣೆ ಹೊರಡಿಸಿದ್ದು, ಈ ಅಪರಿಚಿತ ವ್ಯಕ್ತಿಯ ಬಗ್ಗೆ ತಿಳಿದವರು ಅಥವಾ ಗುರುತಿಸಿದವರು ಸುಬ್ರಹ್ಮಣ್ಯ ಠಾಣೆಯನ್ನು ಸಂಪರ್ಕಿಸುವಂತೆ ತಿಳಿಸಿದ್ದಾರೆ.