

ಸಚಿವ ಶಾಸಕರೊಂದಿಗೆ ಬೆಳಗಾವಿ ಶಾಖಾ ಮಠಕ್ಕೆ ಭೇಟಿ
ವಿಜಯವಾಣಿ ಸುದ್ದಿಜಾಲ ಕಲಬುರಗಿ
ಮುಗಳಖೋಡ-ಜಿಡಗಾ ನವಕಲ್ಯಾಣ ಮಠದ ಪೂಜ್ಯರಾದ ಡಾ.ಮುರುಘರಾಜೇಂದ್ರ ಮಹಾಸ್ವಾಮಿಗಳು ರೈತರ ಅನುಕೂಲಕ್ಕಾಗಿ ಆಳಂದ ತಾಲೂಕಿನ ಜಿಡಗಾ ಗ್ರಾಮದಲ್ಲಿ ಹೊಸ ಕೆರೆ ನಿರ್ಮಾಣ ಯೋಜನೆಗೆ ಶೀಘ್ರದಲ್ಲಿ ಆರ್ಥಿಕ ಇಲಾಖೆ ಅನುಮೋದನೆ ಕೊಡಿಸಲಾಗುವುದು ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಭರವಸೆ ನೀಡಿದರು.
ಬೆಳಗಾವಿಯಲ್ಲಿರುವ ಸುಕ್ಷೇತ್ರ ಮುಗಳಖೋಡ -ಜಿಡಗಾದ ಶಾಖಾ ಮಠಕ್ಕೆ ಸೋಮವಾರ ಸಂಜೆ ಶಾಸಕರ ಜತೆಗೂಡಿ ಭೇಟಿ ನೀಡಿ ಪೂಜ್ಯರ ದರ್ಶನ ಪಡೆದುಕೊಂಡು ಮಠದ ವತಿಯಿಂದ ಸನ್ಮಾನ ಸ್ವೀಕರಿಸಿ, ಪೂಜ್ಯರೊಂದಿಗೆ ಚರ್ಚೆ ನಡೆಸಿ, ಸುಕ್ಷೇತ್ರ ನವ ಕಲ್ಯಾಣ ಜಿಡಗಾ ಶ್ರೀಮಠದಿಂದ ರೈತಾಪಿ ಜನರ ಹಿತಕ್ಕಾಗಿ ೧೧೫ ಎಕರೆ ಪ್ರದೇಶದಲ್ಲಿ ಕೆರೆ ನಿರ್ಮಿಸುವ ಯೋಜನೆಯನ್ನು ಪೂಜ್ಯರು ತಿಳಿಸಿದರು.
ನೀಲನಕ್ಷೆ, ವಿಸ್ತÈತ ಯೋಜನಾ ವರದಿಯನ್ನು ಈಗಾಗಲೇ ಸಂಬAಧಿಸಿದ ಇಲಾಖೆಗೆ ಸಲ್ಲಸಿಲಾಗಿದೆ ಎಂದು ಅದಕ್ಕೆ ಪೂರಕವಾಗಿ ಮಾತನಾಡಿದ ಶಾಸಕರಾದ ಬಿ.ಆರ್.ಪಾಟೀಲ್, ಅಲ್ಲಮಪ್ರಭು ಪಾಟೀಲ, ಡಾ.ಅಜಯ ಧರ್ಮಸಿಂಗ ಅವರು ಡಿಸಿಎಂ ಗಮನಕ್ಕೆ ತಂದರು. ಅನುಮೋದನೆ ಕೊಡುಸುವಂತೆ ಒತ್ತಾಯಿಸಿದಾಗ, ಕೂಡಲೇ ಆ ಕೆಲಸ ಮಾಡುವ ಆಶ್ವಾಸನೆ ನೀಡಿದರು. ಅದಕ್ಕೆ ಸ್ಪಂದಿಸಿದ ಡಿಸಿಎಂ ಅವರು, ಪೂಜ್ಯರು ರೈತರಿಗೆ ನೀರಾವರಿ ಕಲ್ಪಿಸಲು ಕೆರೆ ನಿರ್ಮಿಸಲು ಮುಂದಾಗಿರುವುದು ನಾಡಿಗೆ ಮಾದರಿಯಾಗಿದೆ ಎಂದರು.
ಅರಣ್ಯ ಸಚಿವ ಈಶ್ವರ ಖಂಡ್ರೆ, ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಅಜಯಸಿಂಗ್, ಶಾಸಕರಾದ ಯಶವಂತರಾಯಗೌಡ ಪಾಟೀಲ್,ಅಪ್ಪಾಜಿ ನಾಡಗೌಡ, ಅಶೋಕ ಮನಗೂಳಿ, ಎಂ.ವೈ. ಪಾಟೀಲï,ಎನ್.ಶ್ರೀನಿವಾಸ ಮೊದಲಾದವರಿದ್ದರು.