

ತುಮಕೂರು: ಡಿಸಿಎಂ ಶಿವಕುಮಾರ್ ಹೋರಾಟಗಾರರು. ನಿಮ್ಮ ಆಸೆ ಆಕಾಂಕ್ಷೆಗಳು ಈಡೇರಲು ಭಗವಂತನ ಆಶೀರ್ವಾದ ಇರಲಿ. ಒಳ್ಳೆಯತನ, ಒಳ್ಳೆಯ ನಡವಳಿಕೆ ಸಂಸ್ಕಾರದ ಜೀವನ ಯಾರ್ಯಾರಲ್ಲಿ ಇರುತ್ತೋ ಅವರಿಗೆ ಭಗವಂತನ ಆಶೀರ್ವಾದ ಇರಲಿದೆ. ಅದಕ್ಕೆ ನಾನೂ ನೈಜ ನಿದರ್ಶನ ಎಂದ ಕೇಂದ್ರ ಸಚಿವ ವಿ.ಸೋಮಣ್ಣ, ಸಂಸತ್ ಅಧಿವೇಶನ ಇರುವುದರಿಂದ ನೀವು ಮೊದಲು ಮಾತನಾಡಿ ರಾಜನಾಥ್ ಸಿಂಗ್ ಕೊನೆಯಲ್ಲಿ ಮಾತನಾಡಿ ಹೊರಡಬೇಕಿದೆ ಅಂದಾಗ ಶಿವಕುಮಾರ್ ತಲೆಯಾಡಿಸಿದರು. ಅದಕ್ಕೆ ಸೋಮಣ್ಣ, "ನಾವೇಳಿಂದಗೆ ನೀನು ಕೇಳೋದಿಲ್ಲ. ನಿಂದೇ ಒಂದು ಸೈಲ್ ಇದೆ' ಎಂದು ಹಾಸ್ಯಚಟಾಕಿ ಹಾರಿಸಿದರು.
ಸಿದ್ದಗಂಗಾಮಠದ ಡಾ.ಶಿವಕುಮಾರ ಶ್ರೀಗಳ 118ನೇ ಜಯಂತಿ ಹಾಗೂ ಗುರುವಂದನ ಮಹೋತ್ಸವ ಕಾರ್ಯಕ್ರಮಕ್ಕೆ ರಕ್ಷಣ ಸಚಿವ ರಾಜನಾಥ್ ಸಿಂಗ್ ಜತೆ ಕಾಂಗ್ರೆಸ್ ಸರ್ಕಾರದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ರನ್ನು ಆಹ್ವಾನಿಸಲಾಗಿತ್ತು. ಕಾರ್ಯಕ್ರಮ ಉದ್ಘಾಟನೆ ಬಳಿಕ ವೇದಿಕೆಗೆ ತಡವಾಗಿ ಆಗಮಿಸಿದ ಶಿವಕುಮಾರ್ರನ್ನು ನಗುಮೊಗದಲ್ಲೇ ಎದ್ದುನಿಂತು ಹಸ್ತಲಾವ ಮಾಡಿ ರಾಜನಾಥ್ ಸಿಂಗ್ ಆಹ್ವಾನಿಸಿದ್ದು ಗಮನಸೆಳೆಯಿತು.