ಡಿಸಿಸಿ ಬ್ಯಾಂಕ್​ ಸಾಲ ವಿತರಿಸಲಿ

24KHANAPUR2
Published on

ಖಾನಾಪುರ: ತಾಲೂಕಿನ ಗಾಂಧಿನಗರ ಮತ್ತು ವಾಟ್ರೆಯಲ್ಲಿರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಗಳಿಗೆ ಜಿಲ್ಲಾ ಕೇಂದ್ರ ಬ್ಯಾಂಕ್​ ತಣ ಸಾಲ ಮಂಜೂರು ಮಾಡಬೇಕು ಎಂದು ತಾಲೂಕು ಬ್ಲಾಕ್​ ಕಾಂಗ್ರೆಸ್​ ನಿಯೋಗ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಮತ್ತು ಜಿಲ್ಲಾಧಿಕಾರಿ ಮೊಹಮ್ಮದ್​ ರೋಷನ್​ ಅವರನ್ನು ಒತ್ತಾಯಿಸಿತು.

ಬೆಳಗಾವಿ ನಗರದಲ್ಲಿ ಸೋಮವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಸಭೆಯಲ್ಲಿ ರೆತರು ಸಾಲಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ. ದಾಖಲೆಗಳನ್ನು ಜಿಲ್ಲಾ ಕೇಂದ್ರ ಬ್ಯಾಂಕಿಗೆ ಹಸ್ತಾಂತರಿಸಿ ನಾಲ್ಕೆದು ವರ್ಷಗಳು ಕಳೆದರೂ ಈ ಸಂಸ್ಥೆಗಳಿಗೆ ಸಾಲ ನೀಡಲು ಜಿಲ್ಲಾ ಕೇಂದ್ರ ಬ್ಯಾಂಕ್​ ಹಿಂಜರಿಯುತ್ತಿದೆ. ಇದರಿಂದ ನೂರಾರು ರೆತರಿಗೆ ಅನ್ಯಾಯವಾಗುತ್ತಿದೆ. ಸಾಲ ನೀಡಲು ಹಿಂಜರಿಯುವ ಅಧಿಕಾರಿಗಳು ಮತ್ತು ನಿರ್ದೇಶಕರ ವಿರುದ್ಧ ಕ್ರಮ ಕೆಗೊಳ್ಳಬೇಕೆಂದು ಆಗ್ರಹಿಸಿತು.

ಬೆಳಗಾವಿ ಡಿಸಿಸಿ ಬ್ಯಾಂಕ್​ ರೆತರ ಹಿತದಷ್ಟಿಯಿಂದ ಸೂಕ್ತ ಕ್ರಮ ಕೆಗೊಳ್ಳುವಂತೆ ಸಚಿವರು ಬ್ಯಾಂಕ್​ ಮತ್ತು ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು. ಈ ನಿಟ್ಟಿನಲ್ಲಿ ಬ್ಯಾಂಕ್​ಗಳೊಂದಿಗೆ ತಣ ಸಭೆ ನಡೆಸುವುದಾಗಿ ಕಾಂಗ್ರೆಸ್​ ಪದಾಧಿಕಾರಿಗಳಿಗೆ ತಿಳಿಸಿದರು.

ಶಾಸಕ ಆಸ್​ೀ ಸೇಠ, ಕೆಪಿಸಿಸಿ ಸದಸ್ಯ ಮಹಾದೇವ ಕೋಳಿ ಮತ್ತು ಖಾನಾಪುರ ತಾಲೂಕು ಬ್ಲಾಕ್​ ಕಾಂಗ್ರೆಸ್​ ಅಧ್ಯ ಮಹಾಂತೇಶ ರಾವತ, ಕಾಂಗ್ರೆಸ್​ ನಾಯಕ ಸುರೇಶ ಜಾಧವ, ತೋಹಿತ್​ ಚಂದಕನವರ್​ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net