ಹೀರಾಪುರ ಚೆಕ್ ಪೋಸ್ಟ್ ಗೆ ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ಭೇಟಿ : ವಾಹನ‌ ತಪಾಸಣೆ ಕಾರ್ಯ ಪರಿಶೀಲನೆ

IMG-20240324-WA0022
Published on

ಕಲಬುರಗಿ : ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ರವಿವಾರ ಜಿಲ್ಲಾ ಚುನಾವಣಾಧಿಕಾರಿ ಬಿ.ಫೌಜಿಯಾ ತರನ್ನುಮ್ ಅವರು ಕಲಬುರಗಿ ನಗರದ ಹೀರಾಪೂರ್ ಕ್ರಾಸ್ ಚೆಕ್ ಪೋಸ್ಟ್ ಗೆ ಭೇಟಿ ನೀಡಿ ವಾಹನಗಳ ತಪಾಸಣೆ ಕಾರ್ಯ ಪರಿಶೀಲಿಸಿದರು.

ಚೆಕ್ ಪೋಸ್ಟ್ ಮಾರ್ಗವಾಗಿ ಸಾಗುವ ಪ್ರತಿಯೊಂದು ವಾಹನಗಳ‌ ತಪಾಸಣೆ‌ ಮಾಡಬೇಕು. ಅಕ್ರಮ ಹಣ, ಮದ್ಯ, ಉಚಿತ ಉಡುಗೊರೆ ವಸ್ತುಗಳ ಸಿಕ್ಕಲ್ಲಿ ವಶಕ್ಕೆ ಪಡೆದು ಎಫ್.ಐ.ಆರ್. ದಾಖಲಿಸಬೇಕು. ಇನ್ನು ತಮ್ಮ ಮತ್ತು ಅಪರ ಜಿಲ್ಲಾಧಿಕಾರಿಗಳ ವಾಹನ ಸಹ ತಪಾಸಣೆಗೊಳಪಡಿಸಿ ಎಂದಾಗ ತಪಾಸಣಾ ಸಿಬ್ಬಂದಿ ವಾಹನ ತಪಾಸಣೆ‌ ಮಾಡಿದರು.

ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆಯ ಕಲಬುರಗಿ ವಿಭಾಗದ ಅಪರ ಆಯುಕ್ತ ಡಾ.ಆಕಾಶ ಶಂಕರ, ಅಪರ‌ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net