

ವಿಜಯವಾಣಿ ಸುದ್ದಿಜಾಲ ಕಾಸರಗೋಡು
ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧೀನದಲ್ಲಿರುವ ಪನಾರ್ಕುಲಂ ಪಾರ್ಕ್ಗೆ ಜಿಲ್ಲಾಧಿಕಾರಿ ಕೆ.ಇನ್ಬಾಶೇಖರ್ ಭೇಟಿ ನೀಡಿದರು. ಉದ್ಯಾನವನವನ್ನು ಸಾರ್ವಜನಿಕರ ವೀಕ್ಷಣೆಗೆ ಮುಕ್ತಗೊಳಿಸಲು ಮತ್ತು ಕೆಫೆ ಆರಂಭಿಸಲು ಅನುಮತಿ ನೀಡಲಾಯಿತು. ಚೆಂಗಳ ಗ್ರಾಪಂ ಅಧ್ಯಕ್ಷ ಖಾದರ್ ಬದರಿಯಾ, ವಾರ್ಡ್ ಸದಸ್ಯ ಮಿಸ್ರಿಯಾ ಮುಸ್ತಫಾ, ಡಿಟಿಪಿಸಿ ಕಾರ್ಯದರ್ಶಿ ಲಿಜೋ ಜೋಸೆಫ್, ಪ್ರವಾಸೋದ್ಯಮ ಉಪನಿರ್ದೇಶಕ ಶ್ರೀಕುಮಾರ್ ಮೊದಲಾದವರು ಜಿಲ್ಲಾಧಿಕಾರಿ ಜತೆಗಿದ್ದರು.
ಚೆಂಗಳ ಗ್ರಾಪಂ ವತಿಯಿಂದ ಪಾರ್ಕ್ ಬಳಿಯ ರಸ್ತೆಯನ್ನು ಮೇಲ್ದರ್ಜೆಗೇರಿಸಲಾಗುವುದು. ಕಾಸರಗೋಡು ಕೆಫೆ ಯೋಜನೆಯ ಅಂಗವಾಗಿ ಈ ಯೋಜನೆ ಆರಂಭಗೊಳಿಸಲಾಗಿದ್ದು, ಕೆಫೆ ಆರಂಭಿಸಲು ಕುಟುಂಬಶ್ರೀ ಜತೆ ಮಾತುಕತೆ ನಡೆಸಲಾಗುವುದು ಎಂದು ಅಧ್ಯಕ್ಷರು ಪ್ರಕಟಿಸಿದರು.