

ಕುಂದಾಪುರ: ಉಡುಪಿ ಜಿಲ್ಲೆಯಲ್ಲಿ ಡಿಸಿ ಮನ್ನಾ ಭೂಮಿಗಳನ್ನು ಅರ್ಹ ಭೂರಹಿತ ಪ.ಜಾತಿ/ಪಂಗಡ ಜನರಿಗೆ ಮರುಹಂಚಿಕೆ ವಾಡಬೇಕು. ಜಿಲ್ಲೆಯ ಅಕ್ರಮ ಸಕ್ರಮ ಸಮಿತಿಗಳು ಕರ್ನಾಟಕ ಭೂಮಂಜೂರಾತಿ ಅಧಿನಿಯಮದಂತೆ ಲಭ್ಯ ಭೂಮಿಯ ಶೇ.50ನ್ನು ದಲಿತ ಸಮುದಾಯಗಳಿಗೆ ಮಂಜೂರು ವಾಡಬೇಕು ಎಂದು ಕರ್ನಾಟಕ ದಲಿತ ಸಂರ್ಷ ಸಮಿತಿ ತಾಲೂಕು ಪ್ರಧಾನ ಸಂಚಾಲಕ ಕೆ.ಸಿ.ರಾಜು ಬೆಟ್ಟಿನಮನೆ ಹೇಳಿದರು.
ಪ.ಜಾತಿ/ಪಂಗಡದ ಭೂಮಿ ಮತ್ತು ವಸತಿ ಹಕ್ಕುಗಳಿಗೆ ಆಗ್ರಹಿಸಿ ಕುಂದಾಪುರ ಆಡಳಿತ ಸೌಧದ ಎದುರು ನಡೆದ ಪ್ರತಿಭಟನೆಯಲ್ಲಿ ಮಾತನಾಡಿದರು.
ಸಹಾಯಕ ಕಮಿಷನರ್ ರಶ್ಮಿ ಎಸ್.ಆರ್. ಮನವಿ ಸ್ವೀಕರಿಸಿ, ದಲಿತರಿಗೆ ಭೂಮಿ ನೀಡುವ ಕುರಿತು ಯಾವುದೇ ವಿಳಂಬ ವಾಡುವಂತಿಲ್ಲ. ವಿನಾಕಾರಣ ಅರ್ಜಿ ತಿರಸ್ಕರಿಸುವಂತಿಲ್ಲ. ಅರ್ಜಿಗಳನ್ನು ಬಾಕಿ ಇಡುವಂತಿಲ್ಲ. ತಹಸೀಲ್ದಾರ್ಗಳಿಗೆ ಈ ಬಗ್ಗೆ ಸೂಚನೆ ನೀಡುವುದಾಗಿ ಹೇಳಿದರು.
ಕೋಶಾಧಿಕಾರಿ ಚಂದ್ರ ಕೊರ್ಗಿ, ಸಂಟನಾ ಸಂಚಾಲಕರಾದ ಉದಯ ಕುವಾರ್, ಶ್ರೀಕಾಂತ್, ಚಂದ್ರ ಉಳ್ಳೂರು, ಸತೀಶ್ ರಾಮನಗರ, ಭಾಸ್ಕರ ಆಲೂರು, ಅಶೋಕ ಮೊಳಹಳ್ಳಿ, ಪ್ರಶಾಂತ ಹೈಕಾಡಿ, ಮುಖಂಡರಾದ ಸುರೇಶ ಹಕ್ಲಾಡಿ, ಗೋಪಾಲಕೃಷ್ಣ ನಾಡ, ಭವಾನಿ ನಾಯ್ಕ, ರಾಮ ಗುಳ್ಳಾಡಿ, ದಿನೇಶ್ ಹೊಸ್ಮಠ, ಮಂಜುನಾಥ ಮೊದಲಾದವರು ಇದ್ದರು.