ಅಕ್ರಮ ವಲಸಿಗರ ಬ್ಯಾಂಕ್​ ಖಾತೆ ವಿವರ ಸಲ್ಲಿಸಲು ಸೂಚನೆ

udp-23-police
Published on

ಉಡುಪಿ: ಪೊಲೀಸ್​ ಇಲಾಖೆ ತನಿಖೆ ಸಂದರ್ಭದಲ್ಲಿ ಬ್ಯಾಂಕ್​ ಖಾತೆಯ ಕೆವೈಸಿ ಮಾಹಿತಿ, ಎಟಿಎಂಗಳಲ್ಲಿನ ಸಿಸಿಟಿವಿ ಫೂಟೇಜ್​ಗಳನ್ನು ಶ್ರೀದಲ್ಲಿ ಒದಗಿಸಬೇಕು. ನಕಲಿ ಖಾತೆಗಳ ಬಗ್ಗೆ, ಅಕ್ರಮ ವಲಸಿಗರ ಖಾತೆಗಳ ಬಗ್ಗೆ ಮಾಹಿತಿಯನ್ನು ಇಲಾಖೆ ಜೊತೆ ಹಂಚಿಕೊಳ್ಳುವಂತೆ ಪೊಲೀಸ್​ ಅಧೀಕ್ಷಕ ಹರಿರಾಮ್​ ಶಂಕರ್​ ತಿಳಿಸಿದರು.

ಬುಧವಾರ ಜಿಲ್ಲಾ ಪೊಲೀಸ್​ ಕಚೇರಿ ಸಭಾಂಗಣದಲ್ಲಿ ಆನ್​ಲೈನ್​ ವಂಚನೆ ಪ್ರಕರಣದಲ್ಲಿ ಬ್ಯಾಂಕ್​ ಮತ್ತು ಇಲಾಖೆಯೊಂದಿಗೆ ಸಮನ್ವಯ ಸಾಧಿಸುವ ಸಲುವಾಗಿ ಜಿಲ್ಲೆಯ ವಿವಿಧ ಠಾಣಾ ವ್ಯಾಪ್ತಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ವಿವಿಧ ಬ್ಯಾಂಕ್​ ಮ್ಯಾನೇಜರ್​ಗಳ ಸಭೆಯಲ್ಲಿ ಅವರು ಮಾತನಾಡಿದರು.

ಮುಂದಿನ ದಿನಗಳಲ್ಲಿ ಪೊಲೀಸ್​ ಇಲಾಖೆ ಹಾಗೂ ಬ್ಯಾಂಕ್​ಗಳ ಮಧ್ಯೆ ಸಮನ್ವಯಕ್ಕಾಗಿ ನೋಡಲ್​ ಅಧಿಕಾರಿಗಳನ್ನು ನೇಮಿಸಲಾಗುವುದು. ಖಾತೆ ಪ್ರೀಜ್​ ಹಾಗೂ ಅನ್​ ಪ್ರೀಜ್​ ಮಾಡುವ ಬಗ್ಗೆ ಇಲಾಖೆ ಸೂಚನೆಗಳನ್ನು ಪಾಲಿಸುವಂತೆ ಅವರು ತಿಳಿಸಿದರು. ಹೆಚ್ಚುವರಿ ಪೊಲೀಸ್​ ಅಧೀಕ್ಷಕರಾದ ಸುಧಾಕರ್​ ನಾಯಕ್​ , ಡಾ. ಹರ್ಷಾ ಪ್ರಿಯಂವದಾ ಹಾಗೂ ಡಿಸ್ಟಿಕ್​ ಲೀಡ್​ ಮ್ಯಾನೇಜರ್​ ಹರೀಶ್​ ಜಿ. ಉಪಸ್ಥಿತರಿದ್ದರು. ಸಭೆಯಲ್ಲಿ 140ಕ್ಕೂ ಹೆಚ್ಚು ಬ್ಯಾಂಕ್​ ಅಧಿಕಾರಿಗಳು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net