ಊಟ ಮಾಡುತ್ತಲೇ ಕುಸಿದು ಸಾವನ್ನಪ್ಪಿದ ಡಿಸಿ ಕಚೇರಿ ನೌಕರ

Published on

ರಾಮನಗರ: ನಗರದ ಜಿಲ್ಲಾಧಿಕಾರಿ ಕಚೇರಿ ಡಿ ಗ್ರೂಪ್ ನೌಕರರೊಬ್ಬರು ಊಟ ಮಾಡುವಾಗಲೇ ಹೃದಯಾಘಾತ ಸಂಭವಿಸಿ ಮೃತಪಟ್ಟಿರುವ ಘಟನೆ ಶುಕ್ರವಾರ ಮಧ್ಯಾಹ್ನ ನಡೆದಿದೆ.

ಕಂದಾಯ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಚನ್ನಪಟ್ಟಣದ ವಾಸಿ ಯೋಗೇಶ್ ಕುಮಾರ್ (43) ಮೃತರು.

ಮಧ್ಯಾಹ್ನ 2 ಗಂಟೆ ಸುಮಾರಿಗೆ ಯೋಗೇಶ್ ಅವರು, ಕಚೇರಿಯ ಕುರ್ಚಿಯಲ್ಲಿ ಕುಳಿತು ಊಟ ಮಾಡುತ್ತಿದ್ದರು. ಈ ವೇಳೆ ಅವರ ಮುಂಭಾಗದಲ್ಲಿಯೇ ಮತ್ತೆ ಕೆಲವರು ಮಾತನಾಡುತ್ತಾ ನಿಂತಿದ್ದರು.

ಊಟ ಮಾಡುತ್ತಾ ಕುಳಿತಲ್ಲಿಯೇ ಕುರ್ಚಿಯಿಂದ ನೆಲಕ್ಕೆ ಉರುಳಿದ ಬಿದ್ದ ಯೋಗೇಶ್ ಕುಮಾರ್ ಅವರು ಫಿಡ್ಸ್ ಬಂದಿರ ಬಹುದು ಎಂದು ಕಬ್ಬಿಣದ ಕೀಲಿ ಕೈಯನ್ನು ಸಹ ಅವರ ಕೈಗೆ ನೀಡಿ ತಕ್ಷಣವೇ ಜಿಲ್ಲಾಸ್ಪತ್ರೆಗೆ ಕರೆದೊಯ್ದಿದ್ದಾರೆ.

ಆದರೆ, ಅಷ್ಟೊತ್ತಿಗಾಗಲೇ ಯೋಗೇಶ್ ಕೊನೆಯುಸಿರೆಳೆದಿದ್ದರು. ಘಟನೆಯು ಕಚೇರಿಯಲ್ಲಿ ಅಳವಡಿಸಿರುವ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net