ಬೊಮ್ಮಾಯಿ ಸಂಪುಟದಲ್ಲಿ ಬೆಣ್ಣೆನಗರಿಗಿಲ್ಲ ಸಚಿವ ಸ್ಥಾನ

dav
Published on

ದಾವಣಗೆರೆ : ರಾಜ್ಯದ ನೂತನ ಸಚಿವ ಸಂಪುಟದಲ್ಲಿ ದಾವಣಗೆರೆ ಜಿಲ್ಲೆಗೆ ನಿರಾಸೆಯಾಗಿದೆ. ಜಿಲ್ಲೆಯ 7 ಶಾಸಕರಲ್ಲಿ 5 ಬಿಜೆಪಿ‌ ಶಾಸಕರಿದ್ದರೂ ಒಬ್ಬರಿಗೂ ಸಚಿವ ಸ್ಥಾನ ದೊರಕದಿರುವುದು ವಿಪರ್ಯಾಸವಾಗಿದೆ. ಬಿಎಸ್‌ವೈ ಅಧಿಕಾರಾವಧಿಯಲ್ಲೂ ದಾವಣಗೆರೆ ಜಿಲ್ಲೆ ಸಚಿವ ಸ್ಥಾನದಿಂದ ವಂಚಿತವಾಗಿತ್ತು. ಇದೀಗ ಬೊಮ್ಮಾಯಿ ಸರ್ಕಾರದಲ್ಲೂ ಪ್ರಾತಿನಿಧ್ಯ ಸಿಕ್ಕಿಲ್ಲ.

ಜಿಲ್ಲೆಯ 5 ಶಾಸಕರಲ್ಲಿ 3 ಶಾಸಕರಿಗೆ ಸಚಿವ‌ ಸ್ಥಾನದ ನಿರೀಕ್ಷೆ‌ ಇತ್ತು. ಹಿರಿಯ ಶಾಸಕರಾದ ಎಸ್.ಎ.ರವೀಂದ್ರನಾಥ್ ಸಚಿವ ಸ್ಥಾನದ ನಿರೀಕ್ಷೆಯಲ್ಲಿದ್ದರು. ಕರೊನಾ ಲಾಕ್‌ಡೌನ್ ಸಂದರ್ಭದಲ್ಲಿ‌ ಉತ್ತಮವಾಗಿ ಕಾರ್ಯನಿರ್ವಹಿಸಿದ ಹಿನ್ನೆಲೆಯಲ್ಲಿ ಎಂ.ಪಿ.ರೇಣುಕಾಚಾರ್ಯ ಸಚಿವ ಸ್ಥಾನದ ಆಕಾಂಕ್ಷಿಗಳಾಗಿದ್ದರು. ಮಾಡಾಳು ವಿರೂಪಾಕ್ಷಪ್ಪ ಮತ್ತು ಎಸ್.ವಿ.‌ರಾಮಚಂದ್ರಪ್ಪ ಸಹ‌ ರೇಸಿನಲ್ಲಿದ್ದರು ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net