ಅಡಕೆ ಬೆಳೆ ವಿಮೆಗೆ ಸರ್ವೆ ನಂಬರ್ ಕುತ್ತು Nut

Nut ಜಗಳೂರು ತಾಲೂಕು ಕಚೇರಿ ಎದುರು ಸೋಮವಾರ ಅಡಕೆ ಬೆಳೆ ವಿಮೆ ಪಾವತಿಯಲ್ಲಿ ಎದುರಾಗಿರುವ ಸರ್ವೆ ನಂಬರ್ ತಾಂತ್ರಿಕ ದೋಷ ಸರಿಪಡಿಸುವಂತೆ ಆಗ್ರಹಿಸಿ ಬಿಳಿಚೋಡು ಗ್ರಾಮದ ರೈತರು ಹಮ್ಮಿಕೊಂಡಿದ್ದ ಪ್ರತಿಭಟನೆ. ಹನುಮಂತಪ್ಪ, ನಾಗರಾಜ್, ಶಿವಾನಂದಪ್ಪ, ಕರಿಬಸಪ್ಪ, ಕೆಂಚನಗೌಡ ಚಿತ್ರದಲ್ಲಿದ್ದಾರೆ.
Nut ಜಗಳೂರು ತಾಲೂಕು ಕಚೇರಿ ಎದುರು ಸೋಮವಾರ ಅಡಕೆ ಬೆಳೆ ವಿಮೆ ಪಾವತಿಯಲ್ಲಿ ಎದುರಾಗಿರುವ ಸರ್ವೆ ನಂಬರ್ ತಾಂತ್ರಿಕ ದೋಷ ಸರಿಪಡಿಸುವಂತೆ ಆಗ್ರಹಿಸಿ ಬಿಳಿಚೋಡು ಗ್ರಾಮದ ರೈತರು ಹಮ್ಮಿಕೊಂಡಿದ್ದ ಪ್ರತಿಭಟನೆ. ಹನುಮಂತಪ್ಪ, ನಾಗರಾಜ್, ಶಿವಾನಂದಪ್ಪ, ಕರಿಬಸಪ್ಪ, ಕೆಂಚನಗೌಡ ಚಿತ್ರದಲ್ಲಿದ್ದಾರೆ.
Published on

ಪ್ರಮುಖ ಮುಖ್ಯಾಂಶಗಳು

  • ಜಗಳೂರು ತಾಲೂಕು ಕಚೇರಿ ಎದುರು ರೈತರ ಭಾರಿ ಪ್ರತಿಭಟನೆ!
  • ಪಹಣಿ-ಆಧಾರ್ ಲಿಂಕ್ ಹೊಂದಾಣಿಕೆಯಾಗದೆ ರೈತರು ಕಂಗಾಲು
  • ಜೂನ್ 30 ಕೊನೆ ದಿನವಾಗಿದ್ದರೂ ಬಗೆಹರಿಯದ ತಾಂತ್ರಿಕ ದೋಷ
ಜಗಳೂರು: ಅಡಕೆ ಬೆಳೆ ವಿಮೆ ಪಾವತಿಗೆ ಜಮೀನುಗಳ ಸರ್ವೆ ನಂಬರ್ ಬದಲಾವಣೆಯಾಗಿ ಪಹಣಿ ಹಾಗೂ ಆಧಾರ್ ಕಾರ್ಡ್ ಲಿಂಕ್ ಹೊಂದಾಣಿಕೆಯಾಗದ ತಾಂತ್ರಿಕ ದೋಷವನ್ನು ತಕ್ಷಣವೇ ಸರಿಪಡಿಸುವಂತೆ ಒತ್ತಾಯಿಸಿ ಸೋಮವಾರ ಬಿಳಿಚೋಡು ಸೇರಿದಂತೆ ವಿವಿಧ ಗ್ರಾಮಗಳ ರೈತರು ತಾಲೂಕು ಕಚೇರಿ ಎದುರು ತೀವ್ರ ಪ್ರತಿಭಟನೆ ನಡೆಸಿದರು. Nut
ಬೆಂಕಿಪಟ್ಟೆ ಹೊಸದಾಗಿ ಕಂದಾಯ ಗ್ರಾಮವಾದ ನಂತರ ಬಿಳಿಚೋಡು ವ್ಯಾಪ್ತಿಯ ಹಲವು ಜಮೀನುಗಳ ಸರ್ವೆ ನಂಬರ್‌ಗಳು ಸಂಪೂರ್ಣ ಬದಲಾಗಿವೆ. ಪ್ರಸಕ್ತ ಸಾಲಿನ ಅಡಕೆ ಬೆಳೆಗೆ ವಿಮೆ ಪಾವತಿ ಮಾಡಲು ಜೂನ್ ೩೦ ಕೊನೆಯ ದಿನವಾಗಿದೆ. ಆದರೆ ರೈತರು ಬ್ಯಾಂಕ್ ಅಥವಾ ಸೈಬರ್ ಕೇಂದ್ರಗಳಿಗೆ ಹಣ ಪಾವತಿಸಲು ಹೋದರೆ ಹಳೆ ಹಾಗೂ ಹೊಸ ಸರ್ವೆ ನಂಬರ್‌ಗಳ ಗೊಂದಲದಿಂದ ಪಹಣಿ ಮತ್ತು ಆಧಾರ್ ಲಿಂಕ್ ಹೊಂದಾಣಿಕೆಯಾಗುತ್ತಿಲ್ಲ. ಅಲ್ಲದೆ ತಂತ್ರಾಂಶದಲ್ಲಿ ಜಿಪಿಎಸ್ (GPS) ಕೂಡ ತೆಗೆದುಕೊಳ್ಳುತ್ತಿಲ್ಲ ಎಂದು ಪ್ರತಿಭಟನಾಕಾರರು ದೂರಿದರು.

ಕಚೇರಿಯಿಂದ ಕಚೇರಿಗೆ ಅಧಿಕಾರಿಗಳ ಅಲೆದಾಟ

ಕಿಸಾನ್ ಸಂಘದ ಜಿಲ್ಲಾ ಉಪಾಧ್ಯಕ್ಷ ಹನುಮಂತಪ್ಪ ಮಾತನಾಡಿ, "ಸರ್ವೆ ನಂಬರ್ ಗೊಂದಲದಿಂದಾಗಿ ಹಳೆ ಸರ್ವೆ ನಂಬರ್ ನಮೂದಿಸಿದರೆ ತಂತ್ರಾಂಶದಲ್ಲಿ ಬೇರೆಯವರ ಹೆಸರುಗಳು ಬರುತ್ತಿವೆ. ಪಹಣಿಯಲ್ಲಿರುವ ಜಮೀನಿನ ವಿಸ್ತೀರ್ಣಕ್ಕೂ ಹಾಗೂ ಆಧಾರ್ ಕಾರ್ಡ್‌ನಲ್ಲಿರುವ ವಿವರಕ್ಕೂ ಭಾರಿ ವ್ಯತ್ಯಾಸಗಳು ಕಾಣಿಸುತ್ತಿವೆ. ಈ ಸಮಸ್ಯೆಯ ಬಗ್ಗೆ ತಹಶೀಲ್ದಾರರನ್ನು ಕೇಳಿದರೆ ತೋಟಗಾರಿಕೆ ಇಲಾಖೆಗೆ ಹೋಗಿ ಎನ್ನುತ್ತಾರೆ, ಅಲ್ಲಿಗೆ ಹೋದರೆ ಕಂದಾಯ ಇಲಾಖೆಗೆ ಅಲೆದಾಡಿಸುತ್ತಾರೆ. ಅಧಿಕಾರಿಗಳು ದಿನವಿಡೀ ನಮ್ಮನ್ನು ಕಚೇರಿಯಿಂದ ಕಚೇರಿಗೆ ಅಲೆದಾಡಿಸುತ್ತಾ ಬೇಜವಾಬ್ದಾರಿತನ ಪ್ರದರ್ಶಿಸುತ್ತಿದ್ದಾರೆ" ಎಂದು ಆಕ್ರೋಶ ವ್ಯಕ್ತಪಡಿಸಿದರು.

ವಿಮೆ ತಪ್ಪಿದರೆ ಉಗ್ರ ಹೋರಾಟದ ಎಚ್ಚರಿಕೆ

ಅಡಕೆ ಬೆಳೆ ವಿಮೆ ಮಾಡಿಸಲು ಇನ್ನು ಕೇವಲ ಒಂದು ವಾರ ಮಾತ್ರ ಬಾಕಿ ಉಳಿದಿದೆ. ಈ ತಾಂತ್ರಿಕ ದೋಷದಿಂದಾಗಿ ರೈತರು ವಿಮೆಯಿಂದ ವಂಚಿತರಾದರೆ ಅದಕ್ಕೆ ಕಂದಾಯ ಮತ್ತು ತೋಟಗಾರಿಕೆ ಇಲಾಖೆಯ ಅಧಿಕಾರಿಗಳೇ ನೇರ ಹೊಣೆಯಾಗಲಿದ್ದಾರೆ. ತಕ್ಷಣವೇ ಈ ಸಮಸ್ಯೆಯನ್ನು ಇತ್ಯರ್ಥಪಡಿಸದಿದ್ದರೆ ತಾಲೂಕು ಕಚೇರಿಗೆ ಬೀಗ ಹಾಕಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಬಿಳಿಚೋಡು ಗ್ರಾಮದ ರೈತರಾದ ನಾಗರಾಜ್, ಶಿವಾನಂದಪ್ಪ, ಹನುಮಂತಪ್ಪ, ಕರಿಬಸಪ್ಪ, ಕೆಂಚನಗೌಡ, ಕುಮಾರಸ್ವಾಮಿ ಸೇರಿದಂತೆ ಸುತ್ತಮುತ್ತಲಿನ ಹಳ್ಳಿಗಳ ಹತ್ತಾರು ಪ್ರಮುಖ ರೈತರು ಭಾಗವಹಿಸಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net