ಆನ್‌ಲೈನ್ ಔಷಧ ಮಾರಾಟಕ್ಕೆ ಹಾಕಿ ಕಡಿವಾಣ Online

Onlineಆನ್‌ಲೈನ್ ಔಷಧ ಮಾರಾಟ ವಿರೋಧಿಸಿ ತಾಲೂಕು ಔಷಧ ವ್ಯಾಪಾರಿಗಳ ಸಂಘ ಹೊನ್ನಾಳಿ ತಾಲೂಕು ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿತು. ಶಿವಾನಂದಸ್ವಾಮಿ, ಶೈಲೇಶ್ ಕುಮಾರ್, ವಿಶ್ವನಾಥ್ ಹೆಗ್ಡೆ, ಲೋಕೇಶ್ ಇತರರಿದ್ದರು.
Onlineಆನ್‌ಲೈನ್ ಔಷಧ ಮಾರಾಟ ವಿರೋಧಿಸಿ ತಾಲೂಕು ಔಷಧ ವ್ಯಾಪಾರಿಗಳ ಸಂಘ ಹೊನ್ನಾಳಿ ತಾಲೂಕು ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿತು. ಶಿವಾನಂದಸ್ವಾಮಿ, ಶೈಲೇಶ್ ಕುಮಾರ್, ವಿಶ್ವನಾಥ್ ಹೆಗ್ಡೆ, ಲೋಕೇಶ್ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಹೊನ್ನಾಳಿಯಲ್ಲಿ ಮೆಡಿಕಲ್ ಶಾಪ್ ಮಾಲೀಕರ ಪ್ರತಿಭಟನೆ
  • ಗ್ರೇಡ್-2 ತಹಸೀಲ್ದಾರ್ ಸುರೇಶ್ ಅವರಿಗೆ ಮನವಿ
  • ಬೀದಿ ಪಾಲಾಗಬೇಕಾಗುತ್ತದೆ ಸಾಂಪ್ರದಾಯಿಕ ವ್ಯಾಪಾರಿಗಳು

ಹೊನ್ನಾಳಿ:ಆನ್‌ಲೈನ್ ಮೂಲಕ ನಡೆಯುತ್ತಿರುವ ಅನಿಯಂತ್ರಿತ ಔಷಧ ಮಾರಾಟ ವಿರೋಧಿಸಿ ಹೊನ್ನಾಳಿ ತಾಲೂಕು ಔಷಧ ವ್ಯಾಪಾರಿಗಳ ಸಂಘ ಬುಧವಾರ ತಮ್ಮ ಅಂಗಡಿಗಳನ್ನು ಬಂದ್ ಮಾಡಿ ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿತು. ಬಳಿಕ ಗ್ರೇಡ್-2 ತಹಸೀಲ್ದಾರ್ ಸುರೇಶ್ ಅವರಿಗೆ ಮನವಿ ಸಲ್ಲಿಸಿದರು. Online

ತಾಲೂಕು ಔಷಧ ವ್ಯಾಪಾರಿಗಳ ಸಂಘದ ಅಧ್ಯಕ್ಷ ಶಿವಾನಂದಸ್ವಾಮಿ ಮಾತನಾಡಿ, "ಆನ್‌ಲೈನ್‌ನಲ್ಲಿ ರಿಯಾಯಿತಿ ದರದಲ್ಲಿ ಔಷಧಗಳನ್ನು ಮಾರಾಟ ಮಾಡುತ್ತಿರುವುದರಿಂದ ಸ್ಥಳೀಯ ಸಣ್ಣ ಮತ್ತು ಸಾಂಪ್ರದಾಯಿಕ ಮೆಡಿಕಲ್ ಶಾಪ್‌ಗಳ ವ್ಯಾಪಾರಕ್ಕೆ ಭಾರಿ ಹೊಡೆತ ಬಿದ್ದಿದೆ. ಕೇಂದ್ರ ಸರ್ಕಾರ ಕೂಡಲೇ ಆನ್‌ಲೈನ್ ಔಷಧ ಮಾರಾಟ ಪ್ರಕ್ರಿಯೆಯನ್ನು ನಿಯಂತ್ರಿಸಬೇಕು," ಎಂದು ಆಗ್ರಹಿಸಿದರು.

"ಸರ್ಕಾರಕ್ಕೆ ನಿಯಮಿತವಾಗಿ ನೇರವಾಗಿ ತೆರಿಗೆ ಪಾವತಿಸುವ ನಮ್ಮ ಹಿತ ಕಾಯಲು ಸರ್ಕಾರ ದಿಟ್ಟ ನಿರ್ಧಾರ ಕೈಗೊಳ್ಳಬೇಕು. ಅದನ್ನು ಬಿಟ್ಟು ಕಾರ್ಪೊರೇಟ್ ಕಂಪನಿಗಳ ಆನ್‌ಲೈನ್ ವ್ಯವಹಾರಕ್ಕೆ ಮುಕ್ತ ಅವಕಾಶ ನೀಡಿದರೆ ಸಾಂಪ್ರದಾಯಿಕ ವ್ಯಾಪಾರಿಗಳು ಬೀದಿ ಪಾಲಾಗಬೇಕಾಗುತ್ತದೆ," ಎಂದು ಆತಂಕ ವ್ಯಕ್ತಪಡಿಸಿದರು.

ಯುವಕರ ಹಾದಿ ತಪ್ಪಿಸುತ್ತಿರುವ ಆನ್‌ಲೈನ್ ಮಾರಾಟ:ಸಂಘದ ಗೌರವಾಧ್ಯಕ್ಷ ದತ್ತಾತ್ರೇಯ ವೈಶ್ಯ ಮಾತನಾಡಿ, "ಆನ್‌ಲೈನ್‌ನಲ್ಲಿ ವೈದ್ಯರ ಯಾವುದೇ ಚೀಟಿ (Prescription) ಇಲ್ಲದೆಯೂ ಔಷಧಗಳನ್ನು ಖರೀದಿಸಬಹುದಾಗಿದೆ. ಇದನ್ನು ದುರುಪಯೋಗಪಡಿಸಿಕೊಳ್ಳುತ್ತಿರುವ ಕೆಲವು ಯುವಕರು ಅಮಲು ತರಿಸುವ ಮಾತ್ರೆಗಳನ್ನು ತರಿಸಿಕೊಂಡು ಜೀವನ ಹಾಳುಮಾಡಿಕೊಳ್ಳುತ್ತಿದ್ದಾರೆ. ಹೀಗಾಗಿ ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ಆನ್‌ಲೈನ್ ಔಷಧ ಮಾರಾಟಕ್ಕೆ ಸಂಪೂರ್ಣ ನಿಷೇಧ ಹೇರಬೇಕು. ಈ ಹಿಂದೆಯೂ ಹಲವು ಬಾರಿ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ, ಈಗಲಾದರೂ ಸರ್ಕಾರ ಎಚ್ಚೆತ್ತುಕೊಳ್ಳಬೇಕು," ಎಂದರು.

ತಾಲೂಕು ಖಜಾಂಚಿ ಪ್ರಕಾಶ್ ಹೆಬ್ಬಾರ್ ಮಾತನಾಡಿ, "ಎಂತಹ ತುರ್ತು ಸಂದರ್ಭ ಎದುರಾದರೊ ನಮ್ಮ ಸ್ಥಳೀಯ ಮೆಡಿಕಲ್ ಶಾಪ್‌ಗಳನ್ನು ಮುಚ್ಚದೆ, ದಿನದ 24 ಗಂಟೆಯೂ ಸಾರ್ವಜನಿಕರಿಗೆ ಆರೋಗ್ಯ service ನೀಡುತ್ತೇವೆ. ಇಂತಹ ಸಂದಿಗ್ಧ ಪರಿಸ್ಥಿತಿಗಳಲ್ಲಿ ಆನ್‌ಲೈನ್ ಸೇವೆಗಳು ಜನರ ಉಪಯೋಗಕ್ಕೆ ಬರುವುದಿಲ್ಲ. ಆದ್ದರಿಂದ ಶೀಘ್ರವೇ

ಜಿಲ್ಲಾ ಉಪಾಧ್ಯಕ್ಷ ಶೈಲೇಶ್ ಕುಮಾರ್, ವಿಶ್ವನಾಥ್ ಹೆಗ್ಡೆ, ಲೋಕೇಶ್, ಬಿ.ಎಚ್. ಸಿದ್ದೇಶ್ವರ್, ಸುರೇಶ್, ಶ್ರೀನಿವಾಸ್, ರಂಗನಾಥ್, ನೂರುಲ್ಲಾ, ವೀರೇಶ್, ಅನಿಲ್, ನಂದನ್, ಹರೀಶ್, ಲಿಂಗರಾಜ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net