Education: ಶಿಕ್ಷಣದಿಂದ ಯಾರೂ ವಂಚಿತರಾಗದಿರಿ

Education: ದಿಂಡದಹಳ್ಳಿ ಗ್ರಾಮದ ವಿದ್ಯಾರ್ಥಿ ಮನೆಗೆ ಸೋಮವಾರ ಉಪನ್ಯಾಸಕರಾದ ಮಹಾರುದ್ರಪ್ಪ, ಪಿ. ಅರವಿಂದ್, ಜಗದೀಶ್ ಭೇಟಿ ನೀಡಿ ಮಕ್ಕಳ ಶೈಕ್ಷಣಿಕ ಚಲನವಲನದ ಬಗ್ಗೆ ಮಾಹಿತಿ ನೀಡಿದರು.
Education: ದಿಂಡದಹಳ್ಳಿ ಗ್ರಾಮದ ವಿದ್ಯಾರ್ಥಿ ಮನೆಗೆ ಸೋಮವಾರ ಉಪನ್ಯಾಸಕರಾದ ಮಹಾರುದ್ರಪ್ಪ, ಪಿ. ಅರವಿಂದ್, ಜಗದೀಶ್ ಭೇಟಿ ನೀಡಿ ಮಕ್ಕಳ ಶೈಕ್ಷಣಿಕ ಚಲನವಲನದ ಬಗ್ಗೆ ಮಾಹಿತಿ ನೀಡಿದರು.
Published on

ಪ್ರಮುಖ ಮುಖ್ಯಾಂಶಗಳು

  • ಪ್ರಾಚಾರ್ಯ ಡಾ.ಸಿ. ಬಸವರಾಜಪ್ಪ ಸಲಹೆ
  • ವಿದ್ಯಾರ್ಥಿಗಳ ಮನೆಗಳಿಗೆ ಉಪನ್ಯಾಸಕರ ಭೇಟಿ
  • ಮಕ್ಕಳನ್ನು ಕಾಲೇಜ್ ಬಿಡಿಸದಂತೆ ಪಾಲಕರಿಗೆ ಮನವಿ
ಮಾಯಕೊಂಡ: ಶಿಕ್ಷಣ ಬೆಲೆ ಕಟ್ಟಲಾಗದ ಮತ್ತು ಕಳೆದು ಹೋಗದ ಆಸ್ತಿ. ಆದ್ದರಿಂದ ಯಾವ ವಿದ್ಯಾರ್ಥಿಯೂ ಸಹ ಶಿಕ್ಷಣದಿಂದ ವಂಚಿತವಾಗಬಾರದು ಎಂದು ಮಾಯಕೊಂಡ ಕೆಪಿಎಸ್ ಪ್ರಾಚಾರ್ಯ ಡಾ.ಸಿ. ಬಸವರಾಜಪ್ಪ ಸಲಹೆ ನೀಡಿದರು.
ಇಲ್ಲಿನ ಕರ್ನಾಟಕ ಪಬ್ಲಿಕ್ ಶಾಲೆಯ ಪಿಯು ವಿಭಾಗಗಳ ತರಗತಿಗಳಿಗೆ ಗೈರಾಗುವ ವಿದ್ಯಾರ್ಥಿಗಳ ಮನೆಗಳಿಗೆ ಸೋಮವಾರ ಉಪನ್ಯಾಸಕರೊಂದಿಗೆ ಭೇಟಿ ನೀಡಿ ಮಾತನಾಡಿ, ಮಕ್ಕಳನ್ನು ಕಾಲೇಜ್ ಬಿಡಿಸದಂತೆ ಮತ್ತು ತರಗತಿಗಳಿಗೆ ಹಾಜರಾಗುವಂತೆ ತಿಳಿವಳಿಕೆ ನೀಡಬೇಕು ಎಂದು ಪಾಲಕರಿಗೆ ಮನವಿ ಮಾಡಿದರು.

ತರಗತಿಗಳಿಗೆ ಸರಿಯಾಗಿ ಬರುತ್ತಿಲ್ಲ

ಪಿಯು ವಿಭಾಗದಲ್ಲಿ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಕೋರ್ಸ್‌ಗಳು ನಡೆಯುತ್ತಿದ್ದು, ಒಟ್ಟು 230 ವಿದ್ಯಾರ್ಥಿಗಳು ದಾಖಲಾತಿ ಪಡೆದಿದ್ದಾರೆ. ಇವರಲ್ಲಿ 15 ರಿಂದ 20 ವಿದ್ಯಾರ್ಥಿಗಳು ತರಗತಿಗಳಿಗೆ ಸರಿಯಾಗಿ ಬರುತ್ತಿಲ್ಲ. ಕಾಲೇಜಿಗೆ ಬಂದರೂ ತರಗತಿಗೆ ಹೋಗುತ್ತಿಲ್ಲ. ಹೊರಗಡೆ ಓಡಾಡಿಕೊಂಡು ವಾಪಸ್ ಊರಿಗೆ ಹೋಗುತ್ತಿದ್ದಾರೆ. ಈ ಕುರಿತು ಪಾಲಕರು ಗಮನ ಹರಿಸಬೇಕು ಎಂದರು.
ಗ್ರಾಮದ ಹಾಸ್ಟೆಲ್‌ಗಳಲ್ಲಿರುವ ವಿದ್ಯಾರ್ಥಿಗಳು ತರಗತಿಗಳಿಗೆ ಸರಿಯಾಗಿ ಹಾಜರಾಗದೆ ಊಟ ಮಾಡಿ ಮಲಗುತ್ತಾರೆ. ಹಾಸ್ಟೆಲ್‌ಗಳಿಗೆ ಉಪನ್ಯಾಸಕರೇ ಭೇಟಿ ನೀಡಿ ವಿದ್ಯಾರ್ಥಿಗಳನ್ನು ತರಗತಿಗಳಿಗೆ ಕರೆದುಕೊಂಡು ಬರುವ ಅನಿವಾರ್ಯತೆ ಎದುರಾಗಿದೆ ಎಂದು ತಿಳಿಸಿದರು.

ಓದುವ ಜವಾಬ್ದಾರಿ

ಕಾಲೇಜಿಗೆ ಪ್ರತಿವರ್ಷ ಉತ್ತಮ ಫಲಿತಾಂಶ ಬರುತ್ತಿದೆ. ನುರಿತ ಅನುಭವಿ ಉಪನ್ಯಾಸಕರಿದ್ದಾರೆ. ಈಗಾಗಲೇ ಪಿಯು ಪೂರ್ವ ಸಿದ್ಧತಾ ಹಾಗೂ ಮುಖ್ಯ ಪರೀಕ್ಷೆಗಳು ಸನಿಹದಲ್ಲಿದ್ದು ವಿದ್ಯಾರ್ಥಿಗಳು ಕಾಲಹರಣ ಮಾಡದೆ ತರಗತಿಗಳಿಗೆ ಹಾಜರಾಗಿ ಪಾಠ ಕೇಳುವ ಮತ್ತು ಓದುವ ಜವಾಬ್ದಾರಿ ಇದೆ. ಹಾಗಾಗಿ ಯಾರೂ ತರಗತಿಗೆ ಗೈರಾಗಬೇಡಿ ಎಂದರು.
ಉಪನ್ಯಾಸಕರಾದ ಪಿ. ಮಹಾರುದ್ರಪ್ಪ ಅರವಿಂದ್, ಜಗದೀಶ್ ತಂಡ ದಿಂಡದಹಳ್ಳಿ, ಅಣ್ಣಾಪುರ, ಪರಶುರಾಂಪುರ ಗ್ರಾಮಗಳಿಗೆ ಭೇಟಿ ನೀಡಿ ಪಾಲಕರಿಗೆ ಮಕ್ಕಳ ಶೈಕ್ಷಣಿಕ ಚಲನವಲನದ ಬಗ್ಗೆ ಗಮನ ಕೊಡಬೇಕು ಹಾಗೂ ಜಾಗೃತರಾಗಿರಬೇಕು ಎಂದು ಸೂಚಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net