

ಪ್ರಮುಖ ಮುಖ್ಯಾಂಶಗಳು
ಗ್ರಾಮದಶಾರದಮ್ಮ ಮತ್ತು ತಿಪ್ಪೇಸ್ವಾಮಿದಂಪತಿಯ ಪುತ್ರ ಪ್ರಥಮ್ ಗಾಯಗೊಂಡ ಮಗು.ರಸ್ತೆ ಬದಿಯಮನೆಯ ಮುಂಭಾಗದಲ್ಲಿ ಮಗುಆಟವಾಡುತ್ತಿದ್ದಾಗ ವೇಗವಾಗಿಬಂದ ಮಂಗ ಮಗುವಿನ ಕೆನ್ನೆಗೆಕಚ್ಚಿ, ಮೈ,ಕೈ ಹಾಗೂ ಕಾಲುಗಳನ್ನುಗಾಯಗೊಳಿಸಿದೆ.
ಮಗುವಿನ ಕಿರುಚಾಟಕೇಳಿ ಅಕ್ಕಪಕ್ಕದವರು ಓಡಿ ಬಂದುಮಂಗನಿಂದ ಮಗುವನ್ನು ಬಿಡಿಸಿದ್ದಾರೆ.ಕೂಡಲೇ ಮಗುವನ್ನುಜಗಳೂರು ಸರ್ಕಾರಿ ಆಸ್ಪತ್ರೆಗೆದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದ್ದು,ಸದ್ಯ ಪ್ರಾಣಾಪಾಯದಿಂದ ಪಾರಾಗಿದೆ.
ಆಹಾರದಕೊರತೆಯಿಂದ ಕಾಡಿನಿಂದ ನಾಡಿನಕಡೆಗೆ ಮುಖ ಮಾಡುತ್ತಿರುವ ಮಂಗಗಳುಇತ್ತೀಚೆಗೆ ಗ್ರಾಮದಲ್ಲಿ ಹೆಚ್ಚಿನಸಂಖ್ಯೆಯಲ್ಲಿ ಕಾಣಿಸಿಕೊಳ್ಳುತ್ತಿವೆ.ಮನೆ,ಹೋಟೆಲ್ ಹಾಗೂಹಣ್ಣಿನ ಮರಗಳಿರುವ ಕಡೆ ಗುಂಪಾಗಿಸೇರುತ್ತಿದ್ದು,ಮಕ್ಕಳು,ವೃದ್ಧರು ಹಾಗೂಮಹಿಳೆಯರ ಮೇಲೆ ದಾಳಿ ಮಾಡಬಹುದುಎಂಬ ಆತಂಕ ಗ್ರಾಮಸ್ಥರಲ್ಲಿ ಮನೆಮಾಡಿದೆ.
ಈಭಾಗವು ರಂಗಯ್ಯನದುರ್ಗ ಕೊಂಡಂಡುಕುರಿಅರಣ್ಯ ವ್ಯಾಪ್ತಿಗೆ ಬರುವುದರಿಂದಈ ಹಿಂದೆಯೂ ಕರಡಿಗಳು ರೈತರ ಮೇಲೆದಾಳಿ ಮಾಡಿದ ಉದಾಹರಣೆಗಳಿವೆ.ಈಗ ಮಂಗಗಳ ಹಾವಳಿಶುರುವಾಗಿದ್ದು,ಸಾರ್ವಜನಿಕರುಭಯಭೀತರಾಗಿದ್ದಾರೆ.
ಘಟನೆನಡೆದು ಎರಡು-ಮೂರುದಿನಗಳಾದರೂ ಸಂಬಂಧಪಟ್ಟಅರಣ್ಯಾಧಿಕಾರಿಗಳು ಸ್ಥಳಕ್ಕೆಭೇಟಿ ನೀಡದಿರುವುದು ಪಾಲಕರ ಹಾಗೂಗ್ರಾಮಸ್ಥರ ಆಕ್ರೋಶಕ್ಕೆಕಾರಣವಾಗಿದೆ. ಅಧಿಕಾರಿಗಳಗಮನಕ್ಕೆ ತಂದರೂ ಯಾವುದೇಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರುಆರೋಪಿಸಿದ್ದಾರೆ.