ಹರಿಹರದಲ್ಲಿ ಎಬಿವಿಪಿ, ಹಿಂದೂ ಜಾಗರಣ ವೇದಿಕೆ ಪ್ರತಿಭಟನೆ

ನಿಖಿತ್ ಮೇಲಿನ ಹಲ್ಲೆಗೆ ಖಂಡನೆ
Protest
ಎಬಿವಿಪಿ ಕಾರ್ಯಕರ್ತ ನಿಖಿತ್ ಮೇಲೆ ಹಲ್ಲೆ ಖಂಡಿಸಿ ಎಬಿವಿಪಿ ಕಾರ್ಯಕರ್ತರು ಪ್ರತಿಭಟನೆ ಮಾಡಿದರು.Protest
Published on: 

ಹರಿಹರ: ಮಂಗಳೂರಿನಲ್ಲಿ ಇತ್ತೀಚೆಗೆ ನಡೆದ ಪ್ರತಿಭಟನೆಯಲ್ಲಿ ಎಬಿವಿಪಿ ಕಾರ್ಯಕರ್ತ ನಿಖಿತ್ ಮೇಲೆ ಪೊಲೀಸ್ ಹಲ್ಲೆ ಖಂಡಿಸಿ ಎಬಿವಿಪಿ, ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಶನಿವಾರ ನಗರದಲ್ಲಿ ಪ್ರತಿಭಟನೆ ನಡೆಸಿ ಗ್ರೇಡ್-2 ತಹಸೀಲ್ದಾರ್ ಪುಷ್ಪಾವತಿ ಅವರಿಗೆ ಮನವಿ ಸಲ್ಲಿಸಿದರು.

ಶಿವಮೊಗ್ಗ ರಸ್ತೆಯಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆಯು ಮುಖ್ಯರಸ್ತೆ, ಗಾಂಧಿ ಸರ್ಕಲ್ ಮೂಲಕ ಪೊಲೀಸ್ ದೌರ್ಜನ್ಯದ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ತಾಲೂಕು ಕಚೇರಿ ತಲುಪಿತು. ಎಬಿವಿಪಿ ವಿಭಾಗ ಸಂಘಟನಾ ಕಾರ್ಯದರ್ಶಿ ವಿಜಯ್ ಮಾತನಾಡಿ, ದಸರಾ ಹಬ್ಬಕ್ಕೆ ರಜೆ ನೀಡಲು ಆಗ್ರಹಿಸಿ ಮಂಗಳೂರಿನ ಸಂತ ಅಗ್ನೇಸ್ ಕಾಲೇಜಿನಲ್ಲಿ ವಿದ್ಯಾರ್ಥಿ ಹೋರಾಟದಲ್ಲಿ ಭಾಗವಹಿಸಿದ್ದ ಕಾರ್ಯಕರ್ತ ನಿಖಿತ್ ಮೇಲೆ ಅಲ್ಲಿನ ಎಎಸ್‌ಪಿ ರವೀಶ್ ನಾಯಕ್ ಎಂಬುವರು ಹಲ್ಲೆ ಮಾಡಿರುವುದು ಖಂಡನೀಯ ಎಂದು ಆರೋಪಿಸಿದರು.

ಯಾವುದೇ ನಿಯಮ ಉಲ್ಲಂಘಿಸದೆ ನ್ಯಾಯಬದ್ಧ ಹೋರಾಟದಲ್ಲಿ ತೊಡಗಿದ್ದ ನಿಖಿತ್ ಮೇಲೆ ಉದ್ದೇಶ ಪೂರ್ವಕವಾಗಿ ಹಲ್ಲೆ ಮಾಡಿರುವ ಪೊಲೀಸ್ ಅಧಿಕಾರಿ ಕ್ಷಮೆ ಕೇಳಬೇಕು. ಜತೆಗೆ ಹಬ್ಬಕ್ಕೆ ರಜೆ ನೀಡದೆ ಪರೀಕ್ಷೆಯನ್ನು ನಿಗದಿ ಮಾಡಿರುವ ಕಾಲೇಜು ಆಡಳಿತ ಮಂಡಳಿ ವಿರುದ್ಧ ಕ್ರಮ ಕೈಗೊಳ್ಳಬೇಕು, ತಪ್ಪಿದಲ್ಲಿ ಹೋರಾಟವನ್ನು ರಾಜ್ಯದೆಲ್ಲೆಡೆ ನಡೆಸಲಾಗುವುದು ಎಂದರು.

ಶಾಸಕ ಬಿ.ಪಿ. ಹರೀಶ್, ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಎಸ್.ಎಂ. ವೀರೇಶ್, ಹಿಂದೂ ಜಾಗರಣಾ ವೇದಿಕೆ ಜಿಲ್ಲಾ ಘಟಕದ ಸಹ ಸಂಚಾಲಕ ದಿನೇಶ್, ವಕೀಲ ವೀರೇಶ ಅಜ್ಜಣ್ಣ ನವರ, ನಗರಸಭೆ ಮಾಜಿ ಸದಸ್ಯ ಎ.ಬಿ.ಎಂ. ವಿಜಯಕುಮಾರ್, ಬಿಜೆಪಿ ಗ್ರಾಮೀಣ ಘಟಕದ ಅಧ್ಯಕ್ಷ ಎಂ.ಪಿ. ಲಿಂಗರಾಜ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net