

ಪ್ರಮುಖ ಮುಖ್ಯಾಂಶಗಳು
ಹರಿಹರ:"ಜಾತ್ಯತೀತತತ್ವವು ಕೇವಲ ವೇದಿಕೆ ಮತ್ತುಭಾಷಣಕ್ಕೆ ಸೀಮಿತವಾಗದೆ,ದೈನಂದಿನಬದುಕಿನಲ್ಲಿ ಅಳವಡಿಸಿಕೊಂಡಾಗಮಾತ್ರ ಸಮಸಮಾಜದ ನಿರ್ಮಾಣ ಸಾಧ್ಯ"ಎಂದು ಕಾಗಿನೆಲೆಮಹಾಸಂಸ್ಥಾನ ಪೀಠದ ಶ್ರೀನಿರಂಜನಾನಂದಪುರಿ ಸ್ವಾಮೀಜಿಹೇಳಿದರು. Secular
ತಾಲೂಕಿನ ಬೆಳ್ಳೂಡಿಯಕನಕ ಶಾಖಾಮಠದಲ್ಲಿ ಶನಿವಾರಆಯೋಜಿಸಿದ್ದ ‘ತಲ್ಲಣಿಸದಿರುಮನವೇ’ ಸತ್ಸಂಗದ ೭ನೇ ಆವೃತ್ತಿಯಕಾರ್ಯಕ್ರಮದ ಸಾನ್ನಿಧ್ಯ ವಹಿಸಿಅವರು ಆಶೀರ್ವಚನ ನೀಡಿದರು.
"ಕನಕದಾಸರುಶೂದ್ರ ಸಮಾಜದಲ್ಲಿ ಜನಿಸಿದರೂ,ತಮ್ಮ ಅಪಾರಜ್ಞಾನದ ಲದಿಂದ ಮಡಿವಂತಿಕೆಗೆತಕ್ಕ ಉತ್ತರ ನೀಡಿ ಸಾಧನೆ ಮಾಡಿದರು.ಅದೇ ರೀತಿ ಜಗಜ್ಯೋತಿಬಸವಣ್ಣ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ಅವರು ತಮ್ಮ ಚಿಂತನೆ ಹಾಗೂ ಸಂವಿಧಾನದಮೂಲಕ ಸಮಸಮಾಜದ ಸ್ಥಾಪನೆಗೆ ಗಟ್ಟಿಬುನಾದಿ ಹಾಕಿದ್ದಾರೆ.ಪ್ರತಿಯೊಬ್ಬರದೇಹದಲ್ಲಿ ಹರಿಯುವ ರಕ್ತ ಒಂದೇಆಗಿರುವುದರಿಂದ,ಶಿಕ್ಷಿತರಾದನಾವೆಲ್ಲರೂ ಈ ಮಹಾಪುರುಷರ ಜಾತ್ಯತೀತಆಲೋಚನೆಗಳನ್ನು ಅಳವಡಿಸಿಕೊಳ್ಳಬೇಕು"ಎಂದು ಶ್ರೀಗಳುತಿಳಿಸಿದರು.
ವೈಚಾರಿಕ ಜಾಗೃತಿಮೂಡಿಸುವ ಉದ್ದೇಶದಿಂದ ಪ್ರತಿತಿಂಗಳ ೪ನೇ ಶನಿವಾರ ಈ ಸತ್ಸಂಗಕಾರ್ಯಕ್ರಮ ನಡೆಸಲಾಗುತ್ತಿದೆ.ಪ್ರತಿಯೊಬ್ಬರೂಮಠಕ್ಕಾಗಿ ಸಮಯ ಮೀಸಲಿಟ್ಟು ಈಸತ್ಸಂಗದಲ್ಲಿ ಭಾಗಿಯಾಗಬೇಕುಎಂದು ಶ್ರೀಗಳು ಕರೆ ನೀಡಿದರು.
ಕಾರ್ಯಕ್ರಮಉದ್ಘಾಟಿಸಿ ಮಾತನಾಡಿದ ಹರಿಹರಗ್ರಾಮಾಂತರ ವೃತ್ತ ನಿರೀಕ್ಷಕ(CPI) ಸುರೇಶ್ಸಗರಿ, "ಮನುಷ್ಯನುಮನಸ್ಸಿನ ಚಂಚಲತೆ ಹಾಗೂ ಗೊಂದಲಗಳಿಂದದೂರವಿದ್ದು,ತನ್ನ ಕಾಯಕದಲ್ಲಿನಿರತನಾಗಬೇಕು.ಸಮಯಕ್ಕೆ ಸರಿಯಾದಗೌರವ ನೀಡಿದರೆ ಬದುಕಿನಲ್ಲಿಯಶಸ್ಸು ಕಡ್ಡಾಯವಾಗಿ ಸಿಗುತ್ತದೆ"ಎಂದರು.
ಪ್ರವಚನಕಾರ ರೇವಣಪ್ಪವೀರಬಸಪ್ಪ,ಕಾಂಗ್ರೆಸ್ಮುಖಂಡ ನಂದಿಗಾವಿ ಶ್ರೀನಿವಾಸ್,ಸಾಹಿತಿ ಕಮಲಾಪುರಷಣ್ಮುಖಪ್ಪ,ತಾಲೂಕು ಕನಕನೌಕರರ ಸಂಘದ ಅಧ್ಯಕ್ಷ ಕುಬೇಂದ್ರಪ್ಪಮೆಕ್ಕೆಪ್ಪನವರ್,ಶಿಕ್ಷಕ ರಾಮಣ್ಣ,ಸೋಮಣ್ಣ,ಲಕ್ಷ್ಮಣ್,ರಾಮಕೃಷ್ಣ ಹಾಗೂನೂರಾರು ಭಕ್ತಾದಿಗಳು ಉಪಸ್ಥಿತರಿದ್ದರು.