ತಮ್ಮ ಕಣ್ಣೆದುರೇ ಹಸಿರು ಸಸಿಗಳು ಒಣಗಿ ಹೋಗುತ್ತಿರುವುದನ್ನು ಕಂಡು ಮರುಗಿದ ಚಂದ್ರಪ್ಪ, ತಾವೇ ಸ್ವತಃ ವಿವಿಧ ಜಾತಿಯ ಬೀಜಗಳನ್ನು ಬಿತ್ತಿ ಹೊಸ ಸಸಿಗಳನ್ನು ಸಿದ್ಧಪಡಿಸಿಕೊಂಡರು. ಪಟ್ಟಣದ ಕೆಎಸ್‌ಆರ್‌ಟಿಸಿ (KSRTC) ಬಸ್ ನಿಲ್ದಾಣದಿಂದ ಹಿಡಿದು ವಡ್ಡಿನಕೆರೆ ಹಳ್ಳದವರೆಗಿನ ರಸ್ತೆ ವಿಭಜಕದ ಮಧ್ಯೆ ಖಾಲಿ ಇದ್ದ ಜಾಗದಲ್ಲೆಲ್ಲಾ ಆ ಸಸಿಗಳನ್ನು ನೆಟ್ಟರು.