ಕಸಾಯಿಖಾನೆಗೆ ಸಾಗಿಸುತ್ತಿದ್ದ 39 ಗೋವುಗಳ ರಕ್ಷಣೆ cow

cow ಲಾರಿಯಲ್ಲಿ ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಗೋವುಗಳು.
cow ಲಾರಿಯಲ್ಲಿ ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಗೋವುಗಳು.
Published on

ಪ್ರಮುಖ ಮುಖ್ಯಾಂಶಗಳು

  • ಮೂವರು ಆರೋಪಿಗಳ ಬಂಧನ
  • ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರು ಪತ್ತೆಹಚ್ಚಿ ಪೊಲೀಸರಿಗೆ ಒಪ್ಪಿಸಿದ್ದಾರೆ.
  • ಬಂಧಿತರ ವಿರುದ್ಧ ಸುಮೋಟೋ ಪ್ರಕರಣ

ಚನ್ನಗಿರಿ:ಪಟ್ಟಣದಶ್ರೀ ಶಿವಲಿಂಗೇಶ್ವರ ಸರ್ಕಾರಿಪ್ರಥಮ ದರ್ಜೆ ಕಾಲೇಜು ಬಳಿ ಮಂಗಳವಾರಲಾರಿಯಲ್ಲಿ ಅಕ್ರಮವಾಗಿ ಕಸಾಯಿಖಾನೆಗೆಸಾಗಿಸಲಾಗುತ್ತಿದ್ದ 39ಗೋವುಗಳನ್ನುವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರುಪತ್ತೆಹಚ್ಚಿ ಪೊಲೀಸರಿಗೆಒಪ್ಪಿಸಿದ್ದಾರೆ. cow

ಈಕೃತ್ಯಕ್ಕೆ ಸಂಬಂಧಿಸಿದಂತೆ ಲಾರಿಚಾಲಕರಾದ ಮಂಡ್ಯ ಜಿಲ್ಲೆಯ ಜಾವಗಲ್ತಾಲೂಕಿನ ಬಾಬುಜಾನ್,ನಾಗಮಂಗಲತಾಲೂಕಿನ ನವೀನ್‌ಕುಮಾರ್ ಹಾಗೂಅರಸೀಕೆರೆ ತಾಲೂಕಿನ ಸಿಕಂದರ್ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ.ಬಂಧಿತರವಿರುದ್ಧ ಸುಮೋಟೋ ಪ್ರಕರಣದಾಖಲಿಸಿಕೊಂಡಿದ್ದು,ಗೋವುಗಳನ್ನುಶಿವಮೊಗ್ಗದ ಗೋಶಾಲೆಗೆಕಳುಹಿಸಿಕೊಡಲಾಗಿದೆ.

ಕಾರ್ಯಾಚರಣೆ ವಿವರ

ಹಾಸನದಿಂದ ಚಿತ್ರದುರ್ಗದ ಕಡೆಗೆ ತೆರಳುತ್ತಿದ್ದ ಲಾರಿಯಲ್ಲಿ ಗೋವುಗಳನ್ನು ತುಂಬಿಸಿ ಮೇಲೆ ತಾಡಪಾಲು ಹಾಕಿ ಮುಚ್ಚಲಾಗಿತ್ತು. ಖಚಿತ ಮಾಹಿತಿ ಮೇರೆಗೆ ವಿಎಚ್‌ಪಿ ಕಾರ್ಯಕರ್ತರು ಲಾರಿಯನ್ನು ತಡೆದು ನಿಲ್ಲಿಸಿ ಪರಿಶೀಲಿಸಿ, ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಸಿಪಿಐ ರವೀಶ್, ಸಿಬ್ಬಂದಿ ಮಾಲತೇಶ್, ಗೋರಕ್ಷಾ ಪರಿಷತ್ ಸದಸ್ಯ ವೇದಮೂರ್ತಿ, ವಿಎಚ್‌ಪಿ ಜಿಲ್ಲಾ ಸಂಚಾಲಕ ರವಿಚಂದ್ರ ಇತರರಿದ್ದರು.

ಭಾರತದಲ್ಲಿ ಗೋವುಗಳನ್ನು ದೇವರೆಂದು ಪೂಜಿಸಲಾಗುತ್ತದೆ. ಅವುಗಳಿಂದ ಹಾಲು, ಗೊಬ್ಬರ ಸೇರಿ ಹತ್ತು ಹಲವು ಪ್ರಯೋಜನಗಳನ್ನು ಪಡೆಯುವ ನಾವು, ಅವುಗಳಿಗೆ ವಯಸ್ಸಾದ ಕೂಡಲೇ ಕಟುಕರಿಗೆ ಮಾರಾಟ ಮಾಡುವುದು ಸರಿಯಲ್ಲ. ರೈತರು ಇಂತಹ ಕೆಲಸ ಮಾಡಬಾರದು. ಹಣಕ್ಕಾಗಿ ಗೋವುಗಳನ್ನು ಕಸಾಯಿಖಾನೆಗೆ ಮಾರದೆ, ಅವುಗಳನ್ನು ಅಂತ್ಯದವರೆಗೂ ಸಾಕಿ ಸಲಹಬೇಕು.

— ಟಿ. ಸುಭಾಷ್, ತಾಲೂಕು ಗೋರಕ್ಷಾ ಪರಿಷತ್ ಸದಸ್ಯ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net