

ದಾವಣಗೆರೆ: ವಿಆರ್ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಪದ್ಮಶ್ರೀ ಡಾ. ವಿಜಯ ಸಂಕೇಶ್ವರ ಅವರು ದಾವಣಗೆರೆ ವಿಶ್ವವಿದ್ಯಾನಿಲಯದ ಆವರಣದಲ್ಲಿ ಸೋಮವಾರ ಬೆಳಗ್ಗೆ 'ಸ್ವರ್ಣಪರ್ಣ' ಗಿಡ ನೆಟ್ಟರು.
ದಾವಣಗೆರೆ ವಿವಿಯಲ್ಲಿ ಹಮ್ಮಿಕೊಂಡಿದ್ದ 'ಸಾಧನೆ-ಪ್ರೇರಣೆ' ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಮುನ್ನ ವಿವಿ ಆವರಣದಲ್ಲಿ ಡಾ.ವಿಜಯ ಸಂಕೇಶ್ವರ ಅವರು ಗಿಡ ನೆಟ್ಟರು. ಗಿಡ ನೆಡುವ ಕಾರ್ಯಕ್ರಮದಲ್ಲಿ ಶ್ರೀಮತಿ ಲಲಿತಾ ಸಂಕೇಶ್ವರ, ವಿವಿ ಕುಲಪತಿ ಪ್ರೊ. ಎಸ್.ವಿ. ಹಲಸೆ, ಕುಲಸಚಿವೆ ಗಾಯತ್ರಿ ದೇವರಾಜ್, ವಿವಿಯ ಪ್ರಾಧ್ಯಾಪಕರು ಉಪಸ್ಥಿತರಿದ್ದರು. ಇದನ್ನೂ ಓದಿರಿ ರಾಜ್ಯದಲ್ಲಿ ಲಾಕ್ಡೌನ್ ಆಗತ್ತಾ, ಸೆಮಿ ಲಾಕ್ಡೌನ್ ಇರತ್ತಾ? ಆರೋಗ್ಯ ಸಚಿವರು ಏನು ಹೇಳಿದ್ರು ನೋಡಿ…