ಕರೊನಾ ವಾರಿಯರ್ಸ್​ಗೆ ಬುದ್ಧಿ ಹೇಳಲು ಹೋಗಿ ಪ್ರಧಾನಿಯನ್ನ ಮಾತಿನ ಮಲ್ಲ ಎಂದ ರೇಣುಕಾಚಾರ್ಯ

Renukacharya MP
Published on

ದಾವಣಗೆರೆ: ಕರೊನಾ ವಾರಿಯರ್ಸ್​ಗೆ ಬುದ್ಧಿ ಹೇಳುವ ಭರದಲ್ಲಿ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಪ್ರಧಾನಿ ನರೇಂದ್ರ ಮೋದಿ ಅವರನ್ನು ಮಾತಿನ ಮಲ್ಲ ಎಂದ ಪ್ರಸಂಗ ಹೊನ್ನಾಳಿಯ ಟಿ.ಬಿ. ರಸ್ತೆ, ಹೊಳೆಮಠ ಕಾಂಪೌಂಡ್‌ನಲ್ಲಿ ನಡೆದಿದೆ.

ಕರೊನಾ ಸೋಂಕಿತರಿದ್ದ ಏರಿಯಾವನ್ನು ಸೀಲ್​ಡೌನ್​ ಮಾಡುತ್ತಿದ್ದ ಸಂದರ್ಭದಲ್ಲಿ ಅಲ್ಲಿಗೆ ಶಾಸಕ ರೇಣುಕಾಚಾರ್ಯ ಭೇಟಿ ನೀಡಿದರು. ಈ ವೇಳೆ ಕರೊನಾ ವಾರಿಯರ್ಸ್​ ಒಬ್ಬರು ಕಟ್ಟಡಕ್ಕೆ ಸ್ಯಾನಿಟೈಸರ್​ ಸಿಂಪಡಿಸುತ್ತಿದ್ದ ರೀತಿ ನೋಡಿ, ಬೇರೊಬ್ಬರನ್ನು ಸಿಂಪಡಿಸುವಂತೆ ಹೇಳಿದರು. ಬಳಿಕ ಪ್ರಧಾನಿಯಂತೆ ಇವನೊಬ್ಬ ಮಾತಿನ ಮಲ್ಲ ಎಂದರು.

ಪ್ರಧಾನ ಮಂತ್ರಿ ಮಾಡಿದಂತೆ ಮಾಡುತ್ತಾನೆ. ಅವನೂ ಭಾಷಣ ಮಾಡಲು ಆರಂಭಿಸಿದ್ದಾನೆ ಎಂದು ಕರೊನಾ ವಾರಿಯರ್‌ಗೆ ಛೇಡಿಸಿದರು. ಬುದ್ಧಿ ಹೇಳುವ ಭರದಲ್ಲಿ ಪ್ರಧಾನಿ ಮಂತ್ರಿಯನ್ನೇ ರೇಣುಕಾಚಾರ್ಯ ಮಾತಿನ ಮಲ್ಲ ಎಂದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net