More

    ಈ ಎರಡು ಕರೊನಾ ಔಷಧಿ ಕೊಳ್ಳಲು ನಿಮ್ಮ ಆಧಾರ್​ ಕಾರ್ಡ್​ ರೆಡಿ ಇಟ್ಟುಕೊಳ್ಳಿ…!

    ನವದೆಹಲಿ: ಕರೊನಾ ವೈರಸ್​ ಬಿಕ್ಕಟ್ಟಿನ ನಡುವೆ ಮಾಸ್ಕ್​, ಸ್ಯಾನಿಟೈಸರ್ ಹಾಗೂ ಕರೊನಾ​ ಔಷಧವು ಕಾಳಸಂತೆಯಲ್ಲಿ ಮಾರಾಟವಾಗುತ್ತಿರುವ ಬಗ್ಗೆ ಸಾಕಷ್ಟು ಜನರು ದೂರು ನೀಡಿದ ಬೆನ್ನಲ್ಲೇ ಮಹಾರಾಷ್ಟ್ರ ಸರ್ಕಾರ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ.

    ದೂರಿನ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಗೃಹ ಸಚಿವ ಅನಿಲ್​ ದೇಶ್​ಮುಖ್​ ಇತ್ತೀಚೆಗೆ ಆಹಾರ ಮತ್ತು ಔಷಧ ಆಡಳಿತಾಧಿಕಾರಿಗಳು (ಎಫ್​ಡಿಎ) ಹಾಗೂ ಮುಂಬೈ ಪೊಲೀಸರ ಜತೆ ಸಭೆ ನಡೆಸಿ, ಕರೊನಾ ಸಂದರ್ಭದಲ್ಲಿ ರಾಜ್ಯದಲ್ಲಿ ಕೊರತೆಯಲ್ಲಿರುವ ರೆಮ್ಡೆಸಿವಿರ್ ಮತ್ತು ಟೋಸಿಲಿಜುಮಾಬ್ ಔಷಧದ ಬಗ್ಗೆ ಚರ್ಚೆ ನಡೆಸಿದ್ದಾರೆ.

    ಇದನ್ನೂ ಓದಿ: VIDEO| ವಿಡಿಯೋ ಕಾಲ್​ ಮೂಲಕ ಅಭಿಮಾನಿಗೆ ಧೈರ್ಯ ತುಂಬಿದ ಮಾಣಿಕ್ಯ!

    ಈ ಬಗ್ಗೆ ಮಾತನಾಡಿರುವ ಗೃಹ ಸಚಿವರು ಕಾಳಸಂತೆಕೋರರ ವಿರುದ್ಧ ಕಠಿಣ ಕ್ರಮಕೈಗೊಳ್ಳುವುದಾಗಿ ಎಚ್ಚರಿಸಿದ್ದಾರೆ. ದೂರು ಬಂದ ಹಿನ್ನೆಲೆಯಲ್ಲಿ ಎಫ್​ಡಿಎ ಸಚಿವ ರಾಜೇಂದ್ರ ಶಿಂಗೆ ಇತ್ತೀಚೆಗೆ ಮುಂಬೈನ ಅನೇಕ ಔಷಧ ಮಳಿಗೆಗಳಿಗೆ ಸರ್ಪ್ರೈಸ್​ ಭೇಟಿ ನೀಡಿ ಪರಿಶೀಲನೆಯನ್ನೂ ನಡೆಸಿದ್ದಾರೆ.

    ಈ ಎಲ್ಲಾ ಬೆಳವಣಿಗೆಯ ಬಳಿಕ ಕಾಳಸಂತೆಕೋರರಿಗೆ ಕಡಿವಾಣ ಹಾಕಲು ಹಾಗೂ ಜನರಿಗೆ ರೆಮ್ಡೆಸಿವಿರ್ ಮತ್ತು ಟೋಸಿಲಿಜುಮಾಬ್ ಔಷಧ ಸೂಕ್ತವಾಗಿ ಒದಗಿಸಲು ಸರ್ಕಾರ ತೀರ್ಮಾನಿಸಿದ್ದು, ಔಷಧ ಕೊಳ್ಳಲು ಜನರು ಆಧಾರ್​ ಸೇರಿದಂತೆ ಇನ್ನಿತರ ದಾಖಲಾತಿಗಳನ್ನು ನೀಡಬೇಕಿದೆ.

    ಎಫ್​ಡಿಎ ಈ ಕುರಿತು ಶುಕ್ರವಾರ ಸುತ್ತೋಲೆಯನ್ನು ಹೊರಡಿಸಿದೆ. ಕರೊನಾ ಸೋಂಕಿತರು ಔಷಧಕೊಳ್ಳಲು ಖಡ್ಡಾಯವಾಗಿ ಆಧಾರ್​ ಕಾರ್ಡ್​ ಮಾಹಿತಿ, ವೈದ್ಯರು ನೀಡುವ ಔಷಧ ಚೀಟಿ ಹಾಗೂ ಕೋವಿಡ್ ವರದಿಯೊಂದಿಗೆ ಮೊಬೈಲ್​ ನಂಬರ್ ನೀಡಬೇಕು ಎಂದು ಹೇಳಿದೆ. ರೆಮ್ಡೆಸಿವಿರ್ ಆ್ಯಂಟಿ ವೈರಲ್ ಔಷಧಿಯಾಗಿದ್ದು, ಟೊಸಿಲಿಜುಮಾಬ್ ಉರಿಯೂತದ ಔಷಧವಾಗಿದೆ.

    ಇದನ್ನೂ ಓದಿ: ಕರೊನಾ ಸ್ಪೋಟದ ಬಗ್ಗೆ ಚೀನಾ ಸರ್ಕಾರದ ರಹಸ್ಯ ಬಯಲು ಮಾಡಿದ ಪ್ರಖ್ಯಾತ ವೈರಾಲಜಿಸ್ಟ್​!

    ಇನ್ನೊಂದೆಡೆ ಆಸ್ಪತ್ರೆಗಳೇ ಉತ್ಪಾದಕರಿಂದ ನೇರವಾಗಿ ಔಷಧಗಳನ್ನು ಸಂಗ್ರಹಿಸುತ್ತಿದೆಯೇ ಎಂದು ತಿಳಿಯಲು ಎಫ್​ಡಿಎ ನಿಯಂತ್ರಣ ಪ್ರಾಧಿಕಾರವು ಈಗಾಗಲೇ ತನಿಖೆ ನಡೆಸುತ್ತಿದೆ.

    ಇನ್ನು ಕಾಳಸಂತೆ ಬಗ್ಗೆ ಮಾತನಾಡಿರುವ ಎಫ್​ಡಿಎ ಸಚಿವ ರಾಜೇಂದ್ರ ಶಿಂಗೆ ಔಷಧ ಕೊರತೆಯ ಬಗ್ಗೆ ಸಾಕಷ್ಟು ದೂರುಗಳು ಕೇಳಿಬಂದ ಹಿನ್ನೆಲೆಯಲ್ಲಿ ಹಾಗೂ ಪ್ರಾಯೋಗಿಕ ಔಷಧಿಗಳನ್ನು ಕಾಳಸಂತೆಯಲ್ಲಿ ಮಾರಾಟವಾಗುತ್ತಿರುವ ಕಳವಳದಿಂದ ಈ ಕ್ರಮವನ್ನು ಅನುಸರಿಸಲಾಗಿದೆ ಎಂದಿದ್ದಾರೆ.

    ಈ ಎರಡು ಔಷಧಗಳು (ರೆಮ್ಡೆಸಿವಿರ್ ಮತ್ತು ಟೋಸಿಲಿಜುಮಾಬ್) ಗಂಭೀರ ಸ್ಥಿತಿಯಲ್ಲಿರುವ ಕರೊನಾ ರೋಗಿಗಳಲ್ಲಿ ಚೇತರಿಕೆಗೆ ಕಾರಣವಾದಾಗಿನಿಂದ ಕಳೆದ ಕೆಲವು ದಿನಗಳಿಂದ ಔಷಧಗಳಿಗೆ ಭಾರಿ ಬೇಡಿಕೆ ಬರುತ್ತಿದ್ದು, ಉತ್ಪಾದನೆಯನ್ನು ಚುರುಕುಗೊಳಿಸಲು ಪರವಾನಗಿ ಪಡೆದ ಕಂಪನಿಗಳಿಗೆ ಹೇಳಿರುವುದಾಗಿ ಶಿಂಗೆ ತಿಳಿಸಿದ್ದಾರೆ.

    ಇದನ್ನೂ ಓದಿ: ಜಗಳವಾಡಿ ಮನೆ ಬಿಟ್ಟು ಹೋದ ಬಾಲಕಿಯನ್ನು ಡ್ರಾಪ್ ನೆಪದಲ್ಲಿ ರೇಪ್​ ಮಾಡಿ ಕೊಲೆಗೈದ ದಂಪತಿ

    ಶುಕ್ರವಾರ ದೆಹಲಿ ಸರ್ಕಾರದ ಔಷಧ ನಿಯಂತ್ರಣ ಇಲಾಖೆ ಹೇಳಿರುವ ಪ್ರಕಾರ ರೆಮ್ಡೆಸಿವಿರ್, ಟೋಸಿಲಿಜುಮಾಬ್ ಹಾಗೂ ಫವಿಪಿರಾವಿರ್​ ಔಷಧಿಗಳನ್ನು ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ಮಾತ್ರ ಉಪಯೋಗಿಸಬೇಕು ಮತ್ತು ರಾಜ್ಯ ಔಷಧ ನಿಯಂತ್ರಣ ಔಷಧಗಳ ಕಾಳಸಂತೆಯ ಮೇಲೆ ಹದ್ದಿನ ಕಣ್ಣು ಇಡುವಂತೆ ನಿರ್ದೇಶಿಸಿದೆ.

    ಇನ್ನು ಭಾರತ ಸರ್ಕಾರ ರೆಮ್ಡೆಸಿವಿರ್ ಔಷಧ ತಯಾರಿಕೆ ಮತ್ತು ಮಾರಾಟಕ್ಕೆ ಷರತ್ತುಬದ್ಧ ಅನುಮತಿ ನೀಡಿದೆ. ಇದನ್ನು ತುರ್ತುಸಂದರ್ಭದಲ್ಲಿ ಮಾತ್ರ ಉಪಯೋಗಿಸಬೇಕು. ಅಲ್ಲದೆ, ಕೇವಲ ಮೂರು ಕಂಪನಿಗಳಿಗೆ ಮಾತ್ರ ಉತ್ಪಾದಿಸಲು ಸರ್ಕಾರ ಅನುಮತಿ ನೀಡಿದೆ. (ಏಜೆನ್ಸೀಸ್​)

    ಭಾರತ-ಚೀನಾ ಯುದ್ಧ ಸಂಭವಿಸಿದರೆ ಭಾರತವನ್ನು ಟ್ರಂಪ್ ಬೆಂಬಲಿಸುವುದಿಲ್ಲ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts