'ಕನ್ನಡ' - ಮಗಳ ಹೆಸರು!

Kannada Shetty 3
Published on

ಉಡುಪಿ: ಯುವ ಪೀಳಿಗೆಯಲ್ಲಿ ಕನ್ನಡಾಭಿಮಾನ ಮರೆಯಾಗುತ್ತಿರುವ ಸಮಯದಲ್ಲಿ ಅಪ್ಪಟ್ಟ ಕನ್ನಡಾಭಿಮಾನಿ ಉದ್ಯಮಿಯೊಬ್ಬರು ನವೆಂಬರ್​ನಲ್ಲಿ ಜನಿಸಿದ ಮಗಳಿಗೆ ಕನ್ನಡ ಎಂದು ಹೆಸರಿಟ್ಟಿದ್ದಾರೆ. ಕುಂದಾಪುರ ತಾಲೂಕಿನ ನೆಂಪುವಿನ ಪ್ರತಾಪ್ ಶೆಟ್ಟಿ-ಪ್ರತಿಮಾ ದಂಪತಿ ‘ಕನ್ನಡಾ’ಭಿಮಾನ ಮೆರೆದವರು.

ಬೆಂಗಳೂರಿನಲ್ಲಿ 2019 ನ.27ರಂದು ಜನಿಸಿದ ಚೊಚ್ಚಲ ಮಗಳಿಗೆ ಮುಂದಿನ ತಿಂಗಳು ಹುಟ್ಟುಹಬ್ಬ ಸಂಭ್ರಮ. ಒಳಾಂಗಣ ವಿನ್ಯಾಸ ಗುತ್ತಿಗೆ ವೃತ್ತಿಯಲ್ಲಿರುವ ಪ್ರತಾಪ್ ಶೆಟ್ಟಿ 25 ವರ್ಷಗಳಿಂದ ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯಲ್ಲಿ ನೆಲೆಸಿದ್ದಾರೆ.

ಕಾರ್ಯನಿಮಿತ್ತ ತಮಿಳುನಾಡಿಗೆ ತೆರಳಿದ್ದಾಗ ಅಲ್ಲಿ ಅನೇಕ ಮಂದಿಯ ಹೆಸರು ತಮಿಳರಸನ್, ತಮಿಳುದೊರೈ ಮುಂತಾದ ರೀತಿಯಲ್ಲಿ ಇರುವುದನ್ನು ಗಮನಿಸಿದ್ದೆ. ಹೀಗಾಗಿ ಮಗುವಿಗೆ ಅದೇರೀತಿ ಹೆಸರು ಇಡಬೇಕು ಎಂದು ಯೋಚಿಸಿದೆ. ಈ ಮೂಲಕವಾದರೂ ಕನ್ನಡ ಪದ ಉಚ್ಚಾರಣೆಯಾಗುತ್ತಿರಲಿ ಎಂಬ ಬಯಕೆ ನನ್ನದು. ಇದಕ್ಕೆ ಪತ್ನಿಯೂ ಸಾಥ್ ನೀಡಿದ್ದಾಳೆ. ಅಷ್ಟಕ್ಕೂ ಒಂದು ವಾಕ್ಯದಲ್ಲಿ ಭಾವನೆಯನ್ನು ವ್ಯಕ್ತಪಡಿಸಲು ಸಾಧ್ಯವಿಲ್ಲ ಎನ್ನುತ್ತಾರೆ ಪ್ರತಾಪ್ ಶೆಟ್ಟಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net