More

    ಬಿಹಾರ ಚುನಾವಣೆ: 121 ಸ್ಥಾನಗಳಲ್ಲೂ ಬಿಜೆಪಿ ಸ್ಪರ್ಧೆ- ಮತ್ತೆ ಪಾಲು ಇಲ್ವೇ ಇಲ್ವಂತೆ- ಇನ್ಸಾನ್​ ಪಾರ್ಟಿಗೆ ನಿರಾಸೆ

    ಪಟನಾ: ಬಿಹಾರ ವಿಧಾನಸಭೆಯ ಮೊದಲ ಹಂತದ ಚುನಾವಣೆಗೆ ನಾಮಪತ್ರ ಸಲ್ಲಿಕೆಗೆ ಇನ್ನೆರಡು ದಿನ ಉಳಿದಿದೆ. ಆಡಳಿತಾರೂಢ ಎನ್​ಡಿಎಯಲ್ಲಿ ಜೆಡಿಯು ಮತ್ತು ಬಿಜೆಪಿ ನಡುವೆ ಶೇಕಡ 50-50ರ ಲೆಕ್ಕದಲ್ಲಿ ಸೀಟು ಹಂಚಿಕೆ ಆಗಿದೆ. ಈಗಾಗಲೇ ಜೆಡಿಯು ತನ್ನ ಪಾಲಿನ 122 ಸ್ಥಾನಗಳ ಪೈಕಿ ಹಿಂದುಸ್ತಾನ್ ಅವಾಮಿ ಮೋರ್ಚಾಗೆ 7 ಸ್ಥಾನಗಳನ್ನು ನೀಡಿತ್ತು. ಇನ್ನೊಂದು ಮಿತ್ರ ಪಕ್ಷ ವಿಕಾಸ್​ಶೀಲ್​ ಇನ್​ಸಾನ್ ಪಾರ್ಟಿಗೆ ಬಿಜೆಪಿ ತನ್ನ ಪಾಲಿನಲ್ಲಿ ಸ್ಥಾನಗಳನ್ನು ಬಿಟ್ಟುಕೊಡಬಹುದು ಎಂಬ ಅಂದಾಜಿತ್ತು. ಈ ಬಗ್ಗೆ ನಿತೀಶ್ ಕುಮಾರ್ ಅವರು ಹೇಳಿಕೆಯನ್ನೂ ಕೊಟ್ಟಿದ್ದರು. ಆದರೆ, ರಾತ್ರಿಯಾಗುವಷ್ಟರಲ್ಲಿ ಚಿತ್ರಣ ಸ್ಪಷ್ಟವಾಗಿತ್ತು.

    ತನ್ನ ಪಾಲಿನ 121 ಕ್ಷೇತ್ರಗಳಲ್ಲೂ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲು ಬಿಜೆಪಿ ನಿರ್ಧರಿಸಿದೆ. ಅಷ್ಟೇ ಅಲ್ಲ, ಮೊದಲ ಹಂತದ ಚುನಾವಣೆಯ ಕಣಗಳ ಅಭ್ಯರ್ಥಿಗಳ ಪಟ್ಟಿಯನ್ನೂ ಬಿಡುಗಡೆ ಮಾಡಿದೆ. ಇದರೊಂದಿಗೆ ವಿಕಾಸ್​ ಶೀಲ್ ಇನ್​ಸಾನ್ ಪಾರ್ಟಿಗೆ ಬಿಜೆಪಿ ಮಣೆಹಾಕಿಲ್ಲ ಎಂಬುದು ಸ್ಪಷ್ಟವಾದಂತಾಗಿದೆ.

    ಇದನ್ನು ಓದಿ:  ಬಿಹಾರ ಚುನಾವಣೆ: ಯುಪಿಎ ಮೈತ್ರಿಕೂಟದ ಸೀಟುಹಂಚಿಕೆ ಫೈನಲ್​, ಯಾರಿಗೆಷ್ಟು, ಸಿಎಂ ಅಭ್ಯರ್ಥಿ ಯಾರು?

    ಈ ನಡುವೆ, ಬಿಹಾರದಲ್ಲಿ ಜೆಡಿಯು ಜತೆಗಿನ ಮೈತ್ರಿ ಬಲವಾಗಿದ್ದು, ಬಿಜೆಪಿ ಅದರಿಂದ ಹಿಂದೆ ಸರಿಯುವ ಪ್ರಶ್ನೆ ಇಲ್ಲ. ಎಲ್​ಜೆಪಿ ನಮಗೆ ಕೇಂದ್ರದಲ್ಲಿ ಮಿತ್ರಪಕ್ಷ. ಅದು ಹಾಗೆಯೇ ಮುಂದುವರಿಯಲಿದೆ. ಆದರೆ, ಈ ಸಲದ ಚುನಾವಣೆಯಲ್ಲಿ ಎಲ್​ಜೆಪಿಯವರು ಪ್ರಧಾನಿ ಮೋದಿಯವ ಫೋಟೋವನ್ನು ಪ್ರಚಾರಕ್ಕೆ ಬಳಸುವಂತಿಲ್ಲ ಎಂದು ನಿತೀಶ್ ಕುಮಾರ್​ ಅವರೊಂದಿಗೆ ನಡೆಸಿದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ರಾಜ್ಯ ಘಟಕದ ಮುಖ್ಯಸ್ಥ ಸಂಜಯ್ ಜೈಸ್ವಾಲ್ ಪರೋಕ್ಷವಾಗಿ ಎಚ್ಚರಿಸಿದ್ದಾರೆ. (ಏಜೆನ್ಸೀಸ್)

    ‘ಪ್ರಧಾನಿ ಮೋದಿ ಫೋಟೋ ಬಳಸಬೇಡಿ- ಎಲ್​ಜೆಪಿಗೆ ಬಿಜೆಪಿ ವಾರ್ನಿಂಗ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts