ಅಪ್ಪ-ಅಮ್ಮನಿಂದಲೇ ರಕ್ಷಿಸಿ ಎಂದು ಸಹಾಯವಾಣಿಗೆ ಕರೆ ಮಾಡಿದಳು ಹದಿನೇಳರ ಬಾಲಕಿ!

Girl
Published on

ಬೆಂಗಳೂರು: ಏನಾದರೂ ಆಪತ್ತು ಉಂಟಾದಾಗ ಸಹಾಯಕ್ಕಾಗಿ ತಂದೆ-ತಾಯಿಯರನ್ನು ಕರೆಯುವುದು ಸಹಜ. ಆದರೆ ಇಲ್ಲೊಬ್ಬಳು ಯುವತಿ ಅಪ್ಪ-ಅಮ್ಮನಿಂದಲೇ ರಕ್ಷಿಸಿ ಎಂದು ಸಹಾಯವಾಣಿಗೆ ಕರೆ ಮಾಡಿ ಸಹಾಯ ಕೋರಿದ್ದಾಳೆ.

ಬೆಂಗಳೂರು ಉತ್ತರ ತಾಲೂಕಿನ ಕೆರೆಗುಡ್ಡದಹಳ್ಳಿ ಗ್ರಾಮದ ನಿವಾಸಿ ಆಗಿರುವ 17 ವರ್ಷದ ಬಾಲಕಿ ಸಹಾಯವಾಣಿಗೆ ಕರೆ ಮಾಡಿದವಳು. ಅದರಲ್ಲೂ ಈಕೆ ಸಹಾಯವಾಣಿಗೆ ಕರೆ ಮಾಡಿ ತನ್ನ ಅಪ್ಪ-ಅಮ್ಮನ ವಿರುದ್ಧವೇ ದೂರು ಹೇಳಿದ್ದು, ತನ್ನನ್ನು ರಕ್ಷಿಸಬೇಕು ಎಂದು ಕೋರಿಕೊಂಡಿದ್ದಾಳೆ.

ಅಪ್ಪ-ಅಮ್ಮ ಕಿರುಕುಳ ನೀಡುತ್ತಿದ್ದಾರೆ ಎಂದು ಬಾಲಕಿ ದೂರು ನೀಡಿದ್ದರಿಂದ ಮಕ್ಕಳ ಸಹಾಯವಾಣಿ ಮತ್ತು ಜಿಲ್ಲಾ ಮಕ್ಕಳ ರಕ್ಷಣಾ ಘಟಕದವರು ಜಂಟಿ ಕಾರ್ಯಾಚರಣೆ ನಡೆಸಿ ಬಾಲಕಿಯನ್ನು ರಕ್ಷಿಸಿದ್ದಾರೆ. ಸದ್ಯ ಈಕೆಯನ್ನು ನಗರದಲ್ಲಿರುವ ಬಾಲಮಂದಿರಕ್ಕೆ ಕರೆದೊಯ್ದು ಇರಿಸಲಾಗಿದೆ. ಸೋಲದೇವನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net