ಡೇಟಾ ಸಂರಕ್ಷಣೆ ಏಕೆ ಮುಖ್ಯ: ಸರ್ಕಾರ ಯಾಕೆ ಮುತುವರ್ಜಿ ತೆಗೆದುಕೊಂಡಿದೆ?

vidhana soudha
Published on

ಬೆಂಗಳೂರು: ಸರ್ಕಾರದ ಬಳಕೆಗೆ ನೇರವಾಗಿ ಸರ್ಕಾರಿ, ಅರೆ ಸರ್ಕಾರಿ, ಖಾಸಗಿ ಸೇವಾದಾರರು ಅಥವಾ ಥರ್ಡ್ ಪಾರ್ಟಿ ವ್ಯವಸ್ಥೆ ಮೂಲಕ ಮಾಹಿತಿ ಸಂಗ್ರಹಿಸಿದರೂ ರಕ್ಷಣೆ ಮಾಡುವ ಯಾವುದೇ ವ್ಯವಸ್ಥೆ ಸರ್ಕಾರದ ಬಳಿ ಇಲ್ಲ. ಈ ಡೇಟಾ ಈಗಿನ ಕಾಲಘಟ್ಟದಲ್ಲಿ ದೊಡ್ಡ ಆಸ್ತಿ ಎಂದೇ ಬಹುರಾಷ್ಟ್ರೀಯ ಕಂಪನಿಗಳು ಭಾವಿಸುತ್ತವೆ ಮತ್ತು ಅದನ್ನು ಭಾರಿ ಮೊತ್ತಕ್ಕೆ ಖರೀದಿಸುತ್ತವೆ. ಆ ಮಾಹಿತಿ ಅನುಸಾರವೇ ಗ್ರಾಹಕರನ್ನು ಸೃಷ್ಟಿಕೊಳ್ಳುತ್ತವೆ. ಗ್ರಾಹಕರ ಖಾಸಗಿತನಕ್ಕೆ ಧಕ್ಕೆ ತರುತ್ತವೆ.

ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಬಳಸಿ ಸುಲಭವಾಗಿ ಟಾರ್ಗೆಟ್ ಮಾಡುತ್ತವೆ. ಅಲ್ಲದೆ, ಜನರು ನೀಡಿದ ಮಾಹಿತಿ ಬೇರೆಯವರಿಗೆ ಸಿಗುವಂತಾಗುವುದು ದೌರ್ಭಾಗ್ಯದ ಸಂಗತಿ. ಈ ಕಾರಣಕ್ಕೆ ಒಂದು ಸ್ಪಷ್ಟ ನೀತಿ ತರುವ ಪ್ರಸ್ತಾವನೆ ಸರ್ಕಾರದ ಮುಂದಿದೆ. ಈ ಆದೇಶ ಮತ್ತು ಶಿಷ್ಟಾಚಾರ ಮುಂದಿಟ್ಟುಕೊಂಡು ನೀತಿ ತರುವ ಜತೆಗೆ ಕೇಂದ್ರ ಸರ್ಕಾರ ಜಾರಿ ಮಾಡುವ ಡೇಟಾ ಪ್ರೊಟೆಕ್ಷನ್ ಆಕ್ಟ್ ಬಳಿಕ ಅನುಷ್ಠಾನ ಮಾಡಿಕೊಳ್ಳಲಿದೆ.

ಡೇಟಾದಲ್ಲಿ ಏನಿರುತ್ತೆ? ಹೆಸರು, ವಿಳಾಸ, ಮೊಬೈಲ್ ಸಂಖ್ಯೆ, ವಯಸ್ಸು, ಹಣಕಾಸು ಸ್ಥಿತಿಗತಿ,            ವಾಹನ ವಿವರ, ಆರೋಗ್ಯ ವಿಚಾರ

ಆದೇಶದಲ್ಲೇನಿದೆ? : ಸ್ಟೇಟ್ ಡೇಟಾ ಸೆಂಟರ್​ನಲ್ಲಿ ರಾಜ್ಯ ಸರ್ಕಾರದ ಬಹು ಮುಖ್ಯವಾದ ಅನೇಕ ಅಪ್ಲಿಕೇಶನ್​ಗಳು ಮತ್ತು ದತ್ತಾಂಶ ಇರುವುದರಿಂದ ಅಲ್ಲಿಂದ ಹೊಸ ಸಾಫ್ಟ್ ವೇರ್ ಅಪ್ಲಿಕೇಶನ್ ನಿರ್ವಹಿಸಲು ಭದ್ರತಾ ಕಾರಣಗಳಿಗಾಗಿ ಎಲ್ಲರೂ ಮಾರ್ಗಸೂಚಿ ಅನುಸರಿಸಬೇಕಾದ ಅನಿವಾರ್ಯತೆ ಇದೆ.

ಆದ್ದರಿಂದ ಅಂತಹ ಮಾರ್ಗಸೂಚಿಗಳನ್ನು ಮತ್ತು ದತ್ತಾಂಶ ರಕ್ಷಣಾ/ ನಿರ್ವಹಣಾ ನೀತಿಯನ್ನು ಒಂದು ದಾಖಲೆ ರೂಪದಲ್ಲಿ ತುರ್ತಾಗಿ ಪ್ರಕಟಿಸಲಾಗಿದೆ. ಪ್ರೋಸೆಸ್, ಪ್ರೊಡ್ಯೂಸರ್ಸ್ ಇನ್ ಅಪ್ಲಿಕೇಶನ್ ಹೋಸ್ಟಿಂಗ್ ಮತ್ತು ಬೆಸ್ಟ್ ಪ್ರಾಕ್ಟೀಸಸ್ ಇನ್ ಡೇಟಾ ಪ್ರೊಟೆಕ್ಷನ್ ದಾಖಲೆಯನ್ನು ಇ- ಆಡಳಿತ ಕೇಂದ್ರ ಸಿದ್ಧಪಡಿಸಿದೆ. ಅದರ ಅನ್ವಯ ರಾಜ್ಯ ಸರ್ಕಾರದ ಎಲ್ಲ ಇಲಾಖೆಗಳು ಮಾರ್ಗಸೂಚಿಗಳನ್ನು ಮತ್ತು ದತ್ತಾಂಶ ಅಥವಾ ನಿರ್ವಹಣಾ ನೀತಿಯನ್ನು ಪಾಲಿಸಲು ಆದೇಶಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net