ದಸ್ತಾಪುರ ಸೇತುವೆ ಮುಳುಗಡೆ

01KML01
Published on


ಕಮಲಾಪುರ: ದಸ್ತಾಪುರ ಗ್ರಾಮದ ಶ್ರೀ ಜೈ ಹನುಮಾನ ಮಂದಿರ ಹತ್ತಿರದ ಸೇತುವೆ ಮುಳುಗಡೆಯಾಗಿದ್ದರಿಂದ ಭಾನುವಾರ ಬೆಳಗ್ಗೆಯಿಂದ ವಾಹನ ಸಂಚಾರ ಸ್ಥಗಿತಗೊಂಡಿದೆ. ಗ್ರಾಮದ ಮುಖ್ಯದ್ವಾರ ಬಳಿಯಿರುವ ಸೇತುವೆ ಹಿಂಬದಿಯಲ್ಲಿ ಗಂಡೋರಿ ಜಲಾಶಯದ ನೀರು ಸಂಗ್ರಹವಾಗಿದೆ. ೨೦೦೦ ಜನ ವಾಸಿಸುತ್ತಿದ್ದು, ರಾತ್ರಿ ಹೊತ್ತಿನಲ್ಲಿ ಸೇತುವೆ ಮುಳುಗಿದ್ದರಿಂದ ಜನತೆ ಗ್ರಾಮದಲ್ಲೇ ಠಿಕಾಣಿ ಹೂಡಬೇಕಾದ ಅನಿವಾರ್ಯತೆ ಎದುರಾಗಿದೆ. ತಹಸೀಲ್ದಾರ್ ಮಹಮ್ಮದ್ ಮೊಹಸಿನ್ ಸೇತುವೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ಸಾರ್ವಜನಿಕರು ತಮ್ಮಲ್ಲಿ ಲಭ್ಯವಿರುವ ಪದಾರ್ಥ ಬಳಸಿ ಆಹಾರ ಸ್ವೀಕರಿಸಬೇಕು. ವಿನಾಕಾರಣ ಸೇತುವೆ ಬಳಿ ಬರಕೂಡದು. ಒಂದೆರಡು ದಿನದಲ್ಲಿ ನೀರು ಇಳಿಮುಖವಾಗದಿದ್ದರೆ ಕಾಳಜಿ ಕೇಂದ್ರ ಸ್ಥಾಪಿಸಿ ಜನತೆಗೆ ಅಗತ್ಯ ಸೌಕರ್ಯ ಕಲ್ಪಿಸುವುದಾಗಿ ಹೇಳಿದರು. ಕಂದಾಯ ನಿರೀP್ಷÀಕ ಮಂಜುನಾಥ ಬಿರಾದಾರ, ಗ್ರಾಮ ಆಡಳಿತಾಧಿಕಾರಿ ಪ್ರಭಾವತಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net