

ಬೆಳ್ತಂಗಡಿ: ಮೂಲ್ಕಿ ಸುಂದರ್ ರಾಮ್ ಶೆಟ್ಟಿ ಸಭಾಭವನದಲ್ಲಿ ನಡೆದ ಕೋಸ್ಟಲ್ ಫಿಲ್ಮ್ ಅವಾರ್ಡ್ಸ್ 2025ನಲ್ಲಿ ದಸ್ಕತ್ ಸಿನಿಮಾ ಈ ವರ್ಷದ ಉತ್ತಮ ಚಲನಚಿತ್ರ ಪ್ರಶಸ್ತಿ ಮುಡಿಗೇರಿಸಿದೆ.
ನಿರ್ದೇಶಕ ಅನೀಶ್ ಪೂಜಾರಿ ವೇಣೂರು ಉತ್ತಮ ನಿರ್ದೇಶಕ ಪ್ರಶಸ್ತಿ ಮತ್ತು ಉತ್ತಮ ಹಿನ್ನೆಲೆ ಗಾಯಕ ಪ್ರಶಸ್ತಿಯನ್ನು ಹಾಗೂ ಸಂತೋಷ್ ಆಚಾರ್ಯ ಗುಂಪಲಾಜೆ - ಉತ್ತಮ ಛಾಯಾಗ್ರಾಹಕ, ದೀಕ್ಷಿತ್ ಕೆ.ಪೂಜಾರಿ - ಉತ್ತಮ ನಟ, ಯಶ್ ಶೆಟ್ಟಿ - ಉತ್ತಮ ಖಳ ನಟ, ಸಮರ್ಥನ್ ರಾವ್ - ಉತ್ತಮ ಹಿನ್ನೆಲೆ ಸಂಗೀತ, ಮೋಹನ್ ಶೆಣೈ - ಉತ್ತಮ ಪೋಷಕ ನಟ ಹೀಗೆ ಒಟ್ಟು 8 ಪ್ರಶಸ್ತಿಗಳನ್ನು ದಸ್ಕತ್ ಸಿನೆಮಾ ತಂಡ ಮುಡಿಗೇರಿಸಿದೆ.