ಹಿಂದು ಧರ್ಮದ ಶ್ರದ್ಧಾ ಕೇಂದ್ರಗಳಿಗೆ ಬೆಂಬಲ : ಶಾಸಕ ಡಾ.ಭರತ್ ಶೆಟ್ಟಿ ಹೇಳಿಕೆ

New Project (62)
Published on

ಗುರುಪುರ: ಹಿಂದು ಧರ್ಮದ ಯಾವುದೇ ಜೀರ್ಣೋದ್ಧಾರಗೊಳ್ಳುವ ಶ್ರದ್ಧಾ ಕೇಂದ್ರಗಳಿಗೆ ಶಾಸಕನಾಗಿ ಸಂಪೂರ್ಣ ಬೆಂಬಲವಿದೆ. ಹಿಂದು ದೇವಾಲಯಗಳು ಜೀರ್ಣೋದ್ಧಾರಗೊಂಡಲ್ಲಿ ಹಿಂದು ಸಮಾಜ ಸದೃಢಗೊಳ್ಳುತ್ತದೆ. ಜತೆಗೆ ಈ ಕ್ಷೇತ್ರ ಅಭಿವೃದ್ಧಿಗೆ ದೊಡ್ಡ ಮೊತ್ತದ ದೇಣಿಗೆ ನೀಡುವೆ ಎಂದು ಶಾಸಕ ಡಾ.ಭರತ್ ಶೆಟ್ಟಿ ಹೇಳಿದರು.

ಕಂದಾವರ ಶ್ರೀ ವಾಸುಕಿ ಸುಬ್ರಹ್ಮಣ್ಯ ದೇವಸ್ಥಾನದ ಬಳಿ ಇರುವ ರಾಣೆಯಾರ್(ರಾಣ್ಯ) ಸಮುದಾಯದವರು ಅನಾದಿ ಕಾಲದಿಂದಲೂ ಆರಾಧಿಸಿಕೊಂಡು ಬಂದಿರುವ ಕಂದಾವರ ಬಾಳಿಕೆಬೆಟ್ಟು ಶ್ರೀ ಮಹಮ್ಮಾಯಿ ಕ್ಷೇತ್ರದ ಜೀರ್ಣೋದ್ಧಾರದ ಬಗ್ಗೆ ದೇವಸ್ಥಾನದ ಸಭಾಭವನದಲ್ಲಿ ಭಾನುವಾರ ಸಮಾಲೋಚನಾ ಸಭೆಯಲ್ಲಿ ಮಾತನಾಡಿದರು.

ವಾಸ್ತುತಜ್ಞ ಬ್ರಹ್ಮರ್ಷಿ ಕುಡುಪು ಕೃಷ್ಣರಾಜ ತಂತ್ರಿ ಮಾತನಾಡಿ, ದೇವರ ಇಚ್ಛೆ ಇಲ್ಲದೆ ಯಾವುದೇ ಕೆಲಸ ನಡೆಯದು. ಈ ಕ್ಷೇತ್ರದ ಅಭಿವೃದ್ಧಿ ಕಾಲ ಕೂಡಿ ಬಂದಿದೆ. ಎಲ್ಲರ ಸಹಕಾರ ಮತ್ತು ಕೂಡುವಿಕೆಯಲ್ಲಿ ದೇವರ ಚಿತ್ತದಂತೆ ಈ ಪುಣ್ಯದ ಕೆಲಸ ಶೀಘ್ರ ನೆರವೇರುವಂತಾಗಲಿ ಎಂದರು.

ಕಂದಾವರ ವಾಸುಕಿ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಮೊಕ್ತೇಸರ ಹಾಗೂ ಅಂತಾರಾಷ್ಟ್ರೀಯ ಕ್ರೀಡಾಪಟು ಕಂದಾವರ ಬಾಳಿಕೆ ಶ್ರೀಧರ ಆಳ್ವ ಅಧ್ಯಕ್ಷತೆ ವಹಿಸಿದ್ದರು. ಬೈಲು ಮೂಡುಕರೆ ದೇವದಾಸ ನಾಯ್ಕ, ವಿಠಲದಾಸ ಹೆಗ್ಡೆ ಕಂದಾವರ ಬಾಳಿಕೆ, ಸುಬ್ರಹ್ಮಣ್ಯ ಮಾರ್ಲ, ವಿನೋದ್ ಮಾಡ, ಪ್ರಕಾಶ್ ವಿ.ಶೆಟ್ಟಿ, ಸೇಸಪ್ಪ, ಮಹಮ್ಮಾಯಿ ಸೇವಾ ಸಮಿತಿ ಅಧ್ಯಕ್ಷ ಡೊಂಬಯ್ಯ, ಸೋಹನ್ ಅತಿಕಾರಿ, ಚಂದ್ರಹಾಸ ಶೆಟ್ಟಿ ನಾರಳ, ಶ್ರವಣ್ ಶೆಟ್ಟಿ, ಲಕ್ಷ್ಮೀನಾರಾಯಣ ಉಡುಪ, ರೂಪೇಶ್ ಕುಮಾರ್ ಆದ್ಯಪಾಡಿ, ಉಮೇಶ್ ಮೂಲ್ಯ, ರಾಜೇಂದ್ರ ಕಿನ್ನಿಕಂಬಳ, ನಾರಾಯಣ ಶೆಟ್ಟಿ, ಚಂದ್ರಹಾಸ ಶೆಟ್ಟಿ ಕಂದಾವರ ಹೊಸಮನೆ, ಕಾರ್ಯದರ್ಶಿ ಸೀತಾರಾಮ ರಾಣ್ಯ, ಮಹಾಬಲ ಶೆಟ್ಟಿ ಮತ್ತಿತರರು ಇದ್ದರು. ಡೊಬಯ್ಯ ಪ್ರಸ್ತಾವಿಸಿದರೆ, ಸತೀಶ್ ಶೆಟ್ಟಿ ಕಂದಾವರ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net