

ಹಳೆಯಂಗಡಿ: ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರ ಮತೀಯವಾದದ ಹಿಂದಿರುವ ಕೃತ್ಯಗಳು ಜನಸಾಮಾನ್ಯರನ್ನು ಹೈರಾಣಗೊಳಿಸಿದ್ದು ಸರ್ಕಾರ ಶೀಘ್ರ ತೊಲಗಿದರೆ ಮಾತ್ರ ರಾಜ್ಯದಲ್ಲಿ ಸುಭಿಕ್ಷೆ ಸಾಧ್ಯ ಎಂದು ಬಿಜೆಪಿ ನಾಯಕ ಸತೀಶ್ ಭಟ್ ಕೊಳುವೈಲು ಗುಡುಗಿದರು.
ಹಳೆಯಂಗಡಿ ಪಂಚಾಯಿತಿ ಎದುರು ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಆಯೋಜಿಸಿದ ಪ್ರತಿಭಟನೆಯಲ್ಲಿ ಮಾತನಾಡಿದರು.
ಗ್ರಾಪಂ ಅಧ್ಯಕ್ಷರು ಹಾಗೂ ಮಂಡಲ ಕಾರ್ಯದರ್ಶಿ ಪೂರ್ಣಿಮಾ ಸ್ವಾಗತಿಸಿದರು. ಮಂಡಲ ಪ್ರಭಾರಿ ಶೈಲೇಶ್ ಮೂಲ್ಕಿ ಹಾಗೂ ಗ್ರಾಪಂ ಮಾಜಿ ಉಪಾಧ್ಯಕ್ಷ ಅಶೋಕ್ ಬಂಗೇರ ಹಾಗೂ ಶೋಭೆಂದ್ರ ಸಸಿಹಿತ್ಲು ಮಾತನಾಡಿದರು.
ಪಂಚಾಯಿತಿ ಉಪಾಧ್ಯಕ್ಷೆ ಚಂದ್ರಿಕಾ, ಸದಸ್ಯರು, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಜೀವನ ಪ್ರಕಾಶ್ ಕಾಮೆರೊಟ್ಟು, ಶಕ್ತಿ ಕೇಂದ್ರದ ಪ್ರಮುಖರು, ಬೂತ್ ಅಧ್ಯಕ್ಷ-ಕಾರ್ಯದರ್ಶಿಗಳು, ಕಾರ್ಯಕರ್ತರು, ಪ್ರಮುಖರು, ಗ್ರಾಮಸ್ಥರು ಉಪಸ್ಥಿತರಿದ್ದರು.