ಸತ್ತೂರಿನಲ್ಲಿ ರಾಯರ ಆರಾಧನೆ ದಾಸವಾಣಿ

raghavendra
Published on

ಧಾರವಾಡ: ಸತ್ತೂರಿನ ನಾರಾಯಣ ಪಾರಾಯಣ ಬಳಗದ ಆಶ್ರಯದಲ್ಲಿ ವನಸಿರಿನಗರದಲ್ಲಿರುವ ಈಜುಕೊಳ ಹತ್ತಿರದ ಪಾಂಡುರಂಗ ಕುಲಕರ್ಣಿ ಅವರ ನಿವಾಸದಲ್ಲಿ ಕಲಿಯುಗದ ಕಲ್ಪವೃಕ್ಷ ಕಾಮಧೇನು ಶ್ರೀ ರಾಘವೇಂದ್ರ ಗುರುಸಾರ್ವಭೌಮರ 352ನೇ ಆರಾಧನೆ ಕಾರ್ಯಕ್ರಮ ಏರ್ಪಡಿಸಲಾಗಿದೆ.


ಸೆ. 1ರಂದು ಬೆಳಗ್ಗೆ 7ಕ್ಕೆ ವಿಷ್ಣು ಸಹಸ್ರನಾಮ ಪಾರಾಯಣಗಳು ಹಾಗೂ ಅಷ್ಟೋತ್ತರ ನಂತರ ಜಯತೀರ್ಥ ನಿಲೋಗಲ್ ಇವರಿಂದ ರಾಘವೇಂದ್ರ ತೀರ್ಥರ ಜೀವನ ಚರಿತ್ರೆ ಕುರಿತು ವಿಶೇಷ ಉಪನ್ಯಾಸ ಹಮ್ಮಿಕೊಳ್ಳಲಾಗಿದೆ.

ಸಂಜೆ 4.30ಕ್ಕೆ ಸುಮಂಗಲೆಯರಿಂದ ಅರಿಷಿಣ ಕುಂಕುಮ, ಭಜನೆ ಕಾರ್ಯಕ್ರಮ, ನಂತರ ದಾಸವಾಣಿ ಹಮ್ಮಿಕೊಳ್ಳಲಾಗಿದೆ. ಪಂಡಿತ್ ಮಾಧವ ಗುಡಿ ಅವರ ಶಿಷ್ಯ ಪಾಂಡುರಂಗ ಕುಲಕರ್ಣಿ ನೆರವೇರಿಸಿ ಕೊಡಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net