ಮಳ್ಳವಳ್ಳಿಯಲ್ಲಿ ದಾಸಶ್ರೇಷ್ಠರ ಜಯಂತಿ ಆಚರಣೆ

30 mlv 1
Published on

ಮಳವಳ್ಳಿ: ಪಟ್ಟಣ ಸೇರಿದಂತೆ ತಾಲೂಕಿನ ವಿವಿಧೆಡೆಗಳಲ್ಲಿ ಗುರುವಾರ ದಾಸಶ್ರೇಷ್ಠ ಭಕ್ತ ಕನಕದಾಸರ ಜಯಂತಿ ಆಚರಿಸಲಾಯಿತು.


ತಾಲೂಕು ಆಡಳಿತದ ವತಿಯಿಂದ ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ಕನಕದಾಸರ ಭಾವಚಿತ್ರಕ್ಕೆ ತಹಸೀಲ್ದಾರ್ ಲೋಕೇಶ್ ಮಾಲಾರ್ಪಣೆ ಮಾಡಿ ಪೂಜೆ ಸಲ್ಲಿಸುವ ಮೂಲಕ ಸರಳವಾಗಿ ಆಚರಿಸಲಾಯಿತು. ಮುಖಂಡರಾದ ನಾಗರಾಜು ಪುಟ್ಟಬಸವಯ್ಯ, ಡಾ. ಮಹದೇವು ಹಾಗೂ ತಾಲೂಕು ಕಚೇರಿ ಸಿಬ್ಬಂದಿ ಇದ್ದರು.


ಪುರಸಭೆ ಆವರಣದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಸ್ಮರಿಸಲಾಯಿತು. ಮುಖ್ಯಾಧಿಕಾರಿ ನಾಗರತ್ನಾ, ಪುರಸಭೆ ಸದಸ್ಯರಾದ ಟಿ.ನಂದಕುಮಾರ್, ಪ್ರಶಾಂತ್, ಸಿದ್ದರಾಜು, ಶಿವಸ್ವಾಮಿ, ನೂರುಲ್ಲಾ, ರಾಜಶೇಖರ, ರವಿ ಇದ್ದರು.
ಟಿಎಪಿಸಿಎಂಎಸ್: ತಾಲೂಕು ಟಿಎಪಿಸಿಎಂಎಸ್ ಸೊಸೈಟಿಯಲ್ಲಿ ದಾಸಶ್ರೇಷ್ಠರ ಜಯಂತಿಯನ್ನು ಅಧ್ಯಕ್ಷ ದ್ಯಾಪೇಗೌಡ ಅಧ್ಯಕ್ಷತೆಯಲ್ಲಿ ನಡೆಸಲಾಯಿತು. ಉಪಾಧ್ಯಕ್ಷ ಜೆ.ಕುಮಾರ್, ನಿರ್ದೇಶಕರಾದ ಲಿಂಗರಾಜು, ಬಿ.ಕೆ.ರಾಜೇಶ್, ಸಿಇಒ ಶಿವಕುಮಾರ್ ಹಾಗೂ ಸಿಬ್ಬಂದಿ ಇದ್ದರು.


ಕಸಾಪ: ಕನ್ನಡ ಭವನದಲ್ಲಿ ಕಸಾಪ ವತಿಯಿಂದ ಆಚರಿಸಲಾದ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳ ಸಾಧಕರನ್ನು ಅಭಿನಂದಿಸಲಾಯಿತು. ಕಸಾಪ ತಾಲೂಕು ಅಧ್ಯಕ್ಷ ಚೇತನ್ ಕುಮಾರ್, ಜಿಪಂ ಮಾಜಿ ಸದಸ್ಯ ಪೂರಿಗಾಲಿ ಜಯರಾಜು, ಇನ್‌ಸ್ಪೆಕ್ಟರ್ ರವಿಕುಮಾರ್, ಚಿಕ್ಕಮರಿಗೌಡ, ಜಯಸ್ವಾಮಿ, ಬಸಪ್ಪ ನೆಲಮಾಕನಹಳ್ಳಿ, ಚುಂಚಯ್ಯ, ಸಿದ್ದರಾಜು ಇದ್ದರು.


ರಾಗಿಬೊಮ್ಮನಹಳ್ಳಿ ಶಾಲೆ: ಇಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಕನಕದಾರ ಜಯಂತಿ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಕನಕದಾಸರ ಕೀರ್ತನೆಗಳನ್ನು ಹಾಡುವುದರ ಜತೆಗೆ ಸಾಂಸ್ಕೃತಿಕ ಕಾರ್ಯಕ್ರಮ ಸ್ಪರ್ಧೆಗಳು ನಡೆದವು. ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ಹಾಗೂ ಮಕ್ಕಳಿಗೆ ಸಿಹಿ ವಿತರಣೆ ಮಾಡಲಾಯಿತು. ಮುಖ್ಯಶಿಕ್ಷಕಿ ಪವಿತ್ರಮ್ಮ, ಸಹ ಶಿಕ್ಷಕರಾದ ಮಹದೇವಯ್ಯ, ಸಾಮ್ವೆಲ್, ಜಿ.ಎಸ್.ನಾಗರಾಜು, ಪುರುಷೋತ್ತಮ, ಎಸ್‌ಡಿಎಂಸಿ ಉಪಾಧ್ಯಕ್ಷೆ ಭವ್ಯಾ, ಸದಸ್ಯರಾದ ಶಾಂತಮೂರ್ತಿ, ಸೌಭಾಗ್ಯಾ, ಮುಖಂಡರಾದ ಶಿವಮೂರ್ತಿ, ನೀಲಕಂಠ ಇತರರಿದ್ದರು.


ಪಟ್ಟಣದ ತಾಲೂಕು ಪಂಚಾಯಿತಿ ಸೇರಿದಂತೆ ತಾಲೂಕಿನ 39 ಗ್ರಾಮ ಪಂಚಾಯಿತಿ ಕಾರ್ಯಾಲಯಗಳಲ್ಲೂ ಭಕ್ತ ಕನಕದಾಸರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ದಾಸಶ್ರೇಷ್ಠರ ಸ್ಮರಣೆ ಮಾಡುವ ಮೂಲಕ ಜಯಂತಿಯನ್ನು ಆಚರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net