

ಗೋಕಾಕ: ತಾಲೂಕು ಮಟ್ಟದ 2025&26ನೇ ಸಾಲಿನ ದಸರಾ ಕ್ರೀಡಾಕೂಟವನ್ನು ಸೆ.1 ಮತ್ತು 2ರಂದು ನಗರದ ಶ್ರೀ ಮಹರ್ಷಿ ವಾಲ್ಮೀಕಿ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ. ಈ ಕ್ರೀಡಾಕೂಟದಲ್ಲಿ ಅಥ್ಲೇಟಿಕ್ಸ್ ವಿಭಾಗದ ಪುರುಷರಿಗಾಗಿ 100ಮೀ, 200ಮೀ, 400ಮೀ, 800, 1,500ಮೀ, 5,000ಮೀ, 10,000ಮೀ ಓಟ. ಉದ್ದ ಜಿಗಿತ, ಎತ್ತರ ಜಿಗಿತ, ಗುಂಡು ಎಸೆತ, ಟ್ರಿಪಲ್ ಜಂಪ್, ಜಾವೇಲಿಂಗ್ ಥ್ರೋ, ಡಿಸ್ಕಸ್ ಥ್ರೋ, 110ಮೀ ಹರ್ಡಲ್ಸ್, 4/100 ರಿಲೇ, 4/400 ರಿಲೇ, ಮಹಿಳೆಯರಿಗಾಗಿ 100ಮೀ, 200ಮೀ, 400ಮೀ, 800, 1,500ಮೀ, 3,000ಮೀ ಓಟ. ಉದ್ದ ಜಿಗಿತ, ಎತ್ತರ ಜಿಗಿತ, ಗುಂಡು ಎಸೆತ, ಟ್ರೀಪಲ್ ಜಂಪ್, ಜಾವೆಲಿಂಗ್ ಥ್ರೋ, ಡಿಸ್ಕಸ್ ಥ್ರೋ, 110ಮೀ ಹರ್ಡಲ್ಸ್, 4/100 ರಿಲೇ, ಪುರುಷ ಹಾಗೂ ಮಹಿಳೆಯರಿಗಾಗಿ ವಾಲಿಬಾಲ್, ುಟ್ಬಾಲ್, ಕೋ ಕೋ, ಕಬಡ್ಡಿ, ಥ್ರೋ ಬಾಲ್, ಯೋಗಾಸನ ಸ್ಪರ್ಧೆಗಳು ಇರುತ್ತವೆ. ಭಾಗವಹಿಸುವ ತಾಲೂಕಿನ ಕ್ರೀಡಾಪಟುಗಳು ಸೆ.1ರಂದು ಬೆಳಗ್ಗೆ 9ಗಂಟೆಗೆ ಶ್ರೀ ಮಹರ್ಷಿ ವಾಲ್ಮೀಕಿ ಕ್ರೀಡಾಂಗಣದಲ್ಲಿ ಬ್ಯಾಂಕ್ ಪಾಸ್ಬುಕ್ ಹಾಗೂ ಗುರುತಿನ ಚೀಟಿಯೊಂದಿಗೆ ವರದಿ ಮಾಡಿಕೊಳ್ಳಬೇಕೆಂದು ಪ್ರಕಟಣೆ ತಿಳಿಸಿದೆ.