ದಸರಾ ಅವ್ಯವಸ್ಥೆ : ಮೈಸೂರು ಕನ್ನಡ ವೇದಿಕೆ ಪ್ರತಿಭಟನೆ

ದಸರಾದಲ್ಲಿನ ಅವ್ಯವಸ್ಥೆ ಖಂಡಿಸಿ ಮೈಸೂರು ಮೈಸೂರು ಕನ್ನಡ ವೇದಿಕೆ ವತಿಯಿಂದ ಶನಿವಾರ ಮೈಸೂರು ನಗರದಲ್ಲಿ ಪ್ರತಿಭಟನೆ ನಡೆಯಿತು.
ದಸರಾದಲ್ಲಿನ ಅವ್ಯವಸ್ಥೆ ಖಂಡಿಸಿ ಮೈಸೂರು ಮೈಸೂರು ಕನ್ನಡ ವೇದಿಕೆ ವತಿಯಿಂದ ಶನಿವಾರ ಮೈಸೂರು ನಗರದಲ್ಲಿ ಪ್ರತಿಭಟನೆ ನಡೆಯಿತು.
Published on: 

ಮೈಸೂರು: ನಾಡಹಬ್ಬ ದಸರಾ ಉತ್ಸವದ ಅವ್ಯವಸ್ಥೆಯನ್ನು ಖಂಡಿಸಿ ಶನಿವಾರ ನಗರದ ಹಳೇ ಜಿಲ್ಲಾಧಿಕಾರಿ ಕಚೇರಿ ಬಳಿಯಲ್ಲಿ ಮೈಸೂರು ಕನ್ನಡ ವೇದಿಕೆ ವತಿಯಿಂದ ಪ್ರತಿಭಟನೆ ನಡೆಯಿತು.

ಈ ಬಾರಿ ಪೊಲೀಸರ ದಬ್ಬಾಳಿಕೆಯಿಂದ ಅರಮನೆಯಲ್ಲಿ ನಡೆಯಬೇಕಾಗಿದ್ದ ಜಟ್ಟಿ ಕಾಳಗ ರದ್ದಾಗಿದೆ. 5 ವರ್ಷದ ಮಗುವೊಂದರ ತಲೆಗೆ ಲಾಠಿಯಲ್ಲಿ ಮಾರಣಾಂತಿಕವಾಗಿ ಹಲ್ಲೆ ನಡೆಸಲಾಗಿದೆ. ಮಾಧ್ಯಮದವರ ಕರ್ತವ್ಯಕ್ಕೂ ಅಡ್ಡಿ ಪಡಿಸಿದ್ದಾರೆ. ಅಲ್ಲದೆ, ನಂದಿಪೂಜೆಗೆ ತೆರಳಲು ಸಚಿವರಿಗೆ ಅವಕಾಶ ನೀಡದೆ ಅವರನ್ನು ತಡೆಯಲಾಗಿದೆ. ಪೊಲೀಸರ ಈ ದಬ್ಬಾಳಿಕೆ ಖಂಡನೀಯ ಎಂದು ವೇದಿಕೆ ಅಧ್ಯಕ್ಷ ಬಾಲಕೃಷ್ಣ ಆಕ್ರೋಶ ವ್ಯಕ್ತಪಡಿಸಿದರು.

ಜಂಬೂಸವಾರಿ ವೀಕ್ಷಿಸಲು ಪಾಸ್ ಹಾಗೂ ಟಿಕೆಟ್ ಪಡೆದ ಹಲವರನ್ನು ಪೊಲೀಸರು ಅರಮನೆಯೊಳಗೆ ಬಿಟ್ಟಿಲ್ಲ. ಜನರಿಂದ ಹಣ ಪಡೆದು ಟಿಕೆಟ್ ಹಂಚಿಕೆ ಮಾಡಿರುವ ಜಿಲ್ಲಾಡಳಿತ ಯಾವ ಕಾರಣಕ್ಕೆ ಅವರಿಗೆ ಜಂಬೂಸವಾರಿ ವೀಕ್ಷಣೆಗೆ ಅವಕಾಶ ನೀಡಲಿಲ್ಲ ಎಂಬುದಕ್ಕೆ ಉತ್ತರ ನೀಡಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ವೇದಿಕೆಯ ಪದಾಧಿಕಾರಿಗಳಾದ ನಾಲಾಬೀದಿ ರವಿ, ಬೋಗಾದಿ ಸಿದ್ದೇಗೌಡ, ಗೋಪಿ, ಸಾಯಿ ಚಾಮರಾಜು ಮಂಡಕಳ್ಳಿ, ಪ್ಯಾಲೇಸ್ ಬಾಬು, ಬೀಡಾ ಬಾಬು, ಸುನೀಲ್, ಎಲ್‌ಐಸಿ ಸಿದ್ದಪ್ಪ, ಗೋವಿಂದರಾಜು, ಕಾವೇರಮ್ಮ ಹಾಗೂ ಇತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net