ದಸಾಪ ಜಾತಿಗೆ ಸೀಮಿತವಾಗಿಲ್ಲ

29 gvt 02
ಗಂಗಾವತಿ ಬಾಲಕರ ಸ.ಪ.ಪೂ.ಕಾಲೇಜಿನ ಸಭಾಂಗಣದಲ್ಲಿ ದಸಾಪ ರಾಜ್ಯ ಘಟಕದಿಂದ ಹಮ್ಮಿಕೊಂಡಿದ್ದ ಅಕ್ಷರದವ್ವ ಸಾವಿತ್ರಿ ಬಾಪುಲೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಸಾಹಿತಿ ಸತ್ಯಾನಂದ ಪಾತ್ರೋಟರ ‘ಜಾಲಿ ಮರದಲ್ಲೊಂದು ಜಾಜಿ ಮಲ್ಲಿಗೆ’ ಪುಸ್ತಕ ಬಿಡುಗಡೆಗೊಳಿಸಲಾಯಿತು. ದಲಿತ ಸಾಹಿತ್ಯ ಪರಿಷತ್ತು ರಾಜ್ಯಾಧ್ಯಕ್ಷ ಅರ್ಜುನ ಗೊಳಸಂಗಿ, ಕಸಾಪ ತಾಲೂಕು ಮಾಜಿ ಅಧ್ಯಕ್ಷ ಸಿ.ಎಚ್.ನಾರಿನಾಳ್, ಕರ್ನಾಟಕ ಸಂಗೀತ ನತ್ಯ ಅಕಾಡಮಿ ಸದಸ್ಯ ರಮೇಶ್ ಗಬ್ಬೂರ್, ದಸಾಪ ಜಿಲ್ಲಾಧ್ಯಕ್ಷ ಡಾ.ಲಿಂಗಣ್ಣ ಜಂಗಮರಹಳ್ಳಿ, ತಾಲೂಕಾಧ್ಯಕ್ಷ ಛತ್ರಪ್ಪ ತಂಬೂರಿ, ಗೌರವಾಧ್ಯಕ್ಷ ಕೆ.ನಿಂಗಜ್ಜ ಇತರರಿದ್ದರು.
Published on

ಗಂಗಾವತಿ: ಸಾಮಾಜಿಕ ನ್ಯಾಯಕ್ಕಾಗಿ ಅಸ್ತಿತ್ವಕ್ಕೆ ಬಂದ ದಲಿತ ಸಾಹಿತ್ಯ ಪರಿಷತ್ತು, ವಿಭಿನ್ನ ಕಾರ್ಯಕ್ರಮಗಳ ಮೂಲಕ ಪ್ರತಿಭಾವಂತರನ್ನು ಪರಿಚಯಿಸುತ್ತಿದೆ ಎಂದು ದಲಿತ ಸಾಹಿತ್ಯ ಪರಿಷತ್ತು ರಾಜ್ಯಾಧ್ಯಕ್ಷ ಅರ್ಜುನ ಗೊಳಸಂಗಿ ಹೇಳಿದರು.

ನಗರದ ಬಾಲಕರ ಸ.ಪ.ಪೂ.ಕಾಲೇಜಿನ ಸಭಾಂಗಣದಲ್ಲಿ ದಲಿತ ಸಾಹಿತ್ಯ ಪರಿಷತ್ ರಾಜ್ಯ ಘಟಕದಿಂದ ಶನಿವಾರ ಹಮ್ಮಿಕೊಂಡಿದ್ದ ಅಕ್ಷರದವ್ವ ಸಾವಿತ್ರಿ ಬಾಪುಲೆ ಪ್ರಶಸ್ತಿ ಪ್ರದಾನ ಮತ್ತು ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ದಸಾಪ ಯಾವುದೆ ಜಾತಿಗೆ ಸೀಮಿತವಾಗಿಲ್ಲ. ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿ ಶೋಷಣೆಗೊಳಗಾದ ಬಹುಜನರ ಪ್ರಾತಿನಿಧಿಕ ಸಂಸ್ಥೆ. ಮುಂದಿನ ದಿನದಲ್ಲಿ ಪರಿಷತ್ತು ಕ್ರೀಯಾಶೀಲ ಚಟುವಟಿಕೆಗಳನ್ನು ಮನೆಮನೆಗೆ ವಿಸ್ತರಿಸಲಿದೆ. ಸಮ್ಮೇಳನ ಆಯೋಜನೆಗೆ ಅನುದಾನ ನೀಡುವಂತೆ ಸರ್ಕಾರಕ್ಕೆ ಮೂರು ವರ್ಷಗಳಿಂದ ಮನವಿ ಸಲ್ಲಿಸಲಾಗುತ್ತಿದೆ ಎಂದರು.

ಮಾಧ್ಯಮ ಅಕಾಡಮಿ ಸದಸ್ಯ ಕೆ.ನಿಂಗಜ್ಜ ದಸಾಪ ತಾಲೂಕು ಗೌರವಾಧ್ಯಕ್ಷ ಮಾತನಾಡಿ, ಬುದ್ಧ, ಬಸವ ಮತ್ತು ಅಂಬೇಡ್ಕರ್ ಆದರ್ಶಗಳನ್ನು ದಸಾಪ ಅಳವಡಿಸಿಕೊಂಡಿದ್ದು, ಸರ್ವ ಸಮುದಾಯದ ಒಳಿತಿಗಾಗಿ ಶ್ರಮಿಸುತ್ತಿದೆ ಎಂದರು.

ಸಾಹಿತಿ ಸತ್ಯಾನಂದ ಪಾತ್ರೋಟ ಅವರ ಜಾಲಿ ಮರದಲ್ಲೊಂದು ಜಾಜಿ ಮಲ್ಲಿಗೆ ಪುಸ್ತಕ ಬಿಡುಗಡೆಗೊಳಿಸಲಾಯಿತು. 13 ಶಿಕ್ಷಕರಿಗೆ ಅಕ್ಷರದವ್ವ ಸಾವಿತ್ರಿ ಬಾಪುಲೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ವಿವಿಧ ಅಕಾಡೆಮಿಗಳಿಗೆ ನಾಮನಿರ್ದೇಶನಗೌಡರನ್ನು ಸನ್ಮಾನಿಸಲಾಯಿತು. ಕಸಾಪ ತಾಲೂಕು ಮಾಜಿ ಅಧ್ಯಕ್ಷ ಸಿ.ಎಚ್.ನಾರಿನಾಳ್, ಕರ್ನಾಟಕ ಸಂಗೀತ ನತ್ಯ ಅಕಾಡಮಿ ಸದಸ್ಯ ರಮೇಶ್ ಗಬ್ಬೂರ್, ದಸಾಪ ಜಿಲ್ಲಾಧ್ಯಕ್ಷ ಡಾ.ಲಿಂಗಣ್ಣ ಜಂಗಮರಹಳ್ಳಿ, ತಾಲೂಕಾಧ್ಯಕ್ಷ ಛತ್ರಪ್ಪ ತಂಬೂರಿ, ಕಾರ್ಯದರ್ಶಿ ಮೈಲಾರಪ್ಪ ಬೂದಿಹಾಳ್, ಕಸಾಪ ಜಿಲ್ಲಾಧ್ಯಕ್ಷ ಶರಣೇಗೌಡ ಪೊಪಾ, ತಾಲೂಕಾಧ್ಯಕ್ಷ ಶ್ರೀನಿವಾಸ ಅಂಗಡಿ, ವಿವಿಧ ಸಂಘಟನೆ ಪದಾಧಿಕಾರಿಗಳಾದ ಸೋಮಶೇಖರಗೌಡ, ಹನುಮಂತಪ್ಪ, ಬಸಪ್ಪ ನಾಗೋಲಿ, ಮಂಜುನಾಥ, ಸಿ.ಎಚ್.ದೇವೇಂದ್ರ, ಕೆ.ಎಲ್.ಜಯಲಕ್ಷ್ಮೀ, ಸುಂಕಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net