

ಕುಂದಾಪುರ: ವರ್ಗಾವಣೆಗೊಂಡ ಜಿಲ್ಲಾಧಿಕಾರಿ ಡಾ.ವಿದ್ಯಾಕುಮಾರಿ ಅವರನ್ನು ಜಿಲ್ಲಾಧಿಕಾರಿ ಕಚೇರಿಯಲ್ಲಿ ರಾಜ್ಯ ದಲಿತ ಸಂಘರ್ಷ ಸಮಿತಿ ವತಿಯಿಂದ ಅಭಿನಂದನೆ ಸಲ್ಲಿಸಿ, ಜಿಲ್ಲೆಯ ನೂತನ ಜಿಲ್ಲಾಧಿಕಾರಿಗೆ ಸ್ವಾಗತ ಕೋರಲಾಯಿತು.
ಜನಸಾಮಾನ್ಯರ ಧ್ವನಿಯಾಗಿ ಸಂವಿಧಾನದ ಮೂಲ ಆಶಯಗಳನ್ನು ಎತ್ತಿಹಿಡಿದು, ಅನೇಕ ಜನಪರ ಕಾರ್ಯಕ್ರಮಗಳನ್ನು ಮಾಡಿದ್ದರು ಎಂದು ಜಿಲ್ಲಾಧಿಕಾರಿಯ ಕಾರ್ಯವನ್ನು ಸಮಿತಿ ಮುಖಂಡರು ಪ್ರಶಂಸಿಸಿ ಕೃತಜ್ಞತೆ ಸಲ್ಲಿಸಿದರು.
ನಿಯೋಗದಲ್ಲಿ ಪ್ರಗತಿಪರ ಚಿಂತಕ ಜಯನ್ ಮಲ್ಪೆ, ಜಿಲ್ಲಾ ದೌರ್ಜನ್ಯ ತಡೆ ಜಾಗೃತಿ ಉಸ್ತುವಾರಿ ಸಮಿತಿ ಸದಸ್ಯ ವಾಸುದೇವ ಮುದೂರು, ಲೋಕೋಪಯೋಗಿ ಇಲಾಖೆಯ ಗುತ್ತಿಗೆದಾರರ ಸಂಘದ ಜಿಲ್ಲಾಧ್ಯಕ್ಷ ಪರಮೇಶ್ವರ ಉಪ್ಪೂರು, ಮಲೆಕುಡಿಯ ಸಂಘದ ಜಿಲ್ಲಾಧ್ಯಕ್ಷ ಬಾಲಗಂಗಾಧರ ಗೌಡ, ಅಂಬೇಡ್ಕರ್ ಯುವ ಸೇನೆಯ ಜಿಲ್ಲಾಧ್ಯಕ್ಷ ಗಣೇಶ್ ನೆರ್ಗಿ, ಶಿವಕುಮಾರ್ ಪರ್ಕಳ, ಹರೀಶ್ ಸಾಲ್ಯಾನ್, ಕಮಲಾಕ್ಷ, ನಾರಾಯಣ ಪರ್ಕಳ, ಭಗವಾನ್ ದಾಸ್, ಮೋಹನ್ ದಾಸ್, ರವಿರಾಜ್ ಉಪಸ್ಥಿತರಿದ್ದರು.