

ತುಮಕೂರು: ಬಳ್ಳಾರಿ ಜೈಲಿನಲ್ಲಿರುವ ಕೊಲೆ ಆರೋಪಿ ನಟ ದರ್ಶನ್ಗೆ ಸರ್ಜಿಕಲ್ ಚೇರ್ ಅನ್ನು ನಮ್ಮ ಕಾರಾಗೃಹ ಇಲಾಖೆ ಮಾರ್ಗಸೂಚಿಯಂತೆ ಕೊಡಲಾಗಿರುತ್ತದೆ ಎಂದು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ಹೇಳಿದರು.
ಸರ್ಕಾರವಾಗಲಿ, ನಾವ್ಯಾರು ಅದರಲ್ಲಿ ಮಧ್ಯಸ್ಥಿಕೆ ವಹಿಸಲ್ಲ. ಕಾರಾಗೃಹ ಇಲಾಖೆಯ ಮಾರ್ಗಸೂಚಿಯಂತೆ ಅಲ್ಲಿನ ಸಿಬ್ಬಂದಿ ಕೆಲಸ ಮಾಡುತ್ತಾರೆ. ಅದಕ್ಕಿಂತ ಹೆಚ್ಚಿನ ಸವಲತ್ತು ಬೇಕಾದರೆ ನ್ಯಾಯಾಲಯಕ್ಕೆ ಮನವಿ ಮಾಡಬೇಕು. ಒಂದು ವೇಳೆ ಆರೋಗ್ಯ ದೃಷ್ಟಿಯಿಂದ ವಿಶೇಷ ಸೌಲಭ್ಯಬೇಕ್ಕೆ ನ್ಯಾಯಾಲಯದಲ್ಲಿ ಅರ್ಜಿ ಹಾಕಿಕೊಂಡಾಗ ಕೋರ್ಟ್ ನಿರ್ದೇಶನದಂತೆ ಕಾರಾಗೃಹ ಅಧಿಕಾರಿಗಳು ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದು ತುಮಕೂರಿನಲ್ಲಿ ಸೋಮವಾರ ಸುದ್ದಿಗಾರರಿಗೆ ಸ್ಪಷ್ಟಪಡಿಸಿದರು.
ಇನ್ನೂ ಪರಪ್ಪನ ಅಗ್ರಹಾರ ಜೈಲಿನಲ್ಲಿ ದರ್ಶನಕ್ಕೆ ರಾಜಾತಿಥ್ಯ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳ ವಿರುದ್ಧ ತನಿಖೆಗೆ ಐಪಿಎಸ್ ಅಧಿಕಾರಿ ಚಂದ್ರಗುಪ್ತರನ್ನು ನೇಮಿಸಲಾಗಿದೆ. ತನಿಖೆ ಪ್ರಗತಿಯಲ್ಲಿದ್ದು ವರದಿಯನ್ನು ನಿರೀಸಲಾಗುತ್ತಿದೆ ಎಂದರು.
ಕೆಎಎಸ್ ಪ್ರಿಲಿಮ್ಸ್ ಮರಪರೀೆ: ಇತ್ತೀಚೆಗೆ ನಡೆದ ಕೆಎಎಸ್ ಪೂರ್ವಭಾವಿ ಪರೀೆಯನ್ನು ಮರುಪರೀೆ ನಡೆಸಲು ಸಿಎಂ ಆದೇಶ ಹೊರಡಿಸಿ, ಇನ್ನೆರಡು ತಿಂಗಳಲ್ಲಿ ಮಾಡಲು ಸೂಚನೆ ನೀಡಿದ್ದಾರೆ ಎಂದು ಪರಮೇಶ್ವರ ಪತ್ರಕರ್ತರ ಪ್ರಶ್ನೆಗೆ ಉತ್ತರ ನೀಡಿದರು.
ಎರಡು ಮೂರು ಬಾರಿ ಪರೀೆ ನಡೆಸಿದರೆ ಹಣ ವ್ಯರ್ಥವಾಗಲಿದೆ ಎಂದು ಸುಮ್ಮನೆ ಕೂರಲಿಕ್ಕೆ ಆಗುತ್ತಾ. ಪರೀೆಯನ್ನು ಸರಿಯಾಗಿ ಮಾಡಬೇಕಲ್ಲವಾ? ಕಾಪಿ ಹೊಡೀತಾರೆ, ಇನ್ನು ಪ್ರಶ್ನೆಪತ್ರಿಕೆಗಳನ್ನೇ ಸೋರಿಕೆ ಮಾಡುತ್ತಾರೆ. ಹಾಗೆಂದು ಯಾರೋ ಹೇಳಿದ ತಕ್ಷಣ ಮರುಪರೀೆ ನಡೆಸುವುದಿಲ್ಲ. ಎಲ್ಲಾ ರೀತಿಯ ಮಾಹಿತಿ ತೆಗೆದುಕೊಂಡು ಖಚಿತ ಪಡಿಸಿಕೊಂಡ ಬಳಿಕ ಮರುಪರೀೆ ಮಾಡಲಾಗುವುದು ಎಂದರು.
ಸಬ್ಇನ್ಸೆಪಕ್ಸರ್ ಮರು ಪರೀೆಯನ್ನು ಯಾವುದಾದರು ಸ್ವತಂತ್ರ ಏಜೆನ್ಸಿಯಿಂದ ಮಾಡಲು ನ್ಯಾಯಾಲಯ ಆದೇಶ ನೀಡಿತ್ತು. ಅದರಂತೆ ನಾವು ಕೆಇಎ ಮೂಲಕ ಪರೀೆ ನಡೆಸಿ ಮೌಲ್ಯಮಾಪನ ಕೂಡ ಮಾಡಿ ಅಂತಿಮ ಹಂತಕ್ಕೆ ಈ ಪ್ರಕ್ರಿಯೆ ಬಂದಿದೆ. ಇನ್ನೊಂದು ಪ್ರಕರಣದಲ್ಲಿ 402 ಸಬ್ ಇನ್ಸೆಪೆಕ್ಟರ್ ಹುದ್ದೆಗಳಿಗೆ ಕೂಡ ಮರು ಪರೀೆ ಮಾಡಿದ್ದೀವಿ. ಯಾರಿಗೂ ಅನ್ಯಾಯವಾಗಬಾರದೆಂದು ಮರು ಪರೀೆ ಮಾಡಿದ್ದೀವಿ ಎಂದು ತಿಳಿಸಿದರು.