ಕಲಬುರಗಿ: ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧಿತನಾದ ಚಿತ್ರನಟ ದರ್ಶನ್ ಅವರ ಮ್ಯಾನೇಜರ್ ನಾಗರಾಜ ಅಲಿಯಾಸ್ ನಾಗನನ್ನು ಕಲಬುರಗಿ ಸೆಂಟ್ರಲ್ ಜೈಲಿಗೆ ಶನಿವಾರ ಸಂಜೆ ಕರೆ ತರಲಾಗಿದೆ. ಬೆಂಗಳೂರಿನ ಪರಪ್ಪನ ಅಗ್ರಹಾರ ಸಿಬ್ಬಂದಿ ಜೈಲು ವಾಹನದಲ್ಲಿ ಬೆಂಗಳೂರಿನಿAದ ಕರೆತಂದಿದ್ದಾರೆ. ಮುಖ್ಯ ಅಧೀಕ್ಷಕ ಡಾ.ರಂಗನಾಥ ಪಿ. ಪ್ರಕ್ರಿಯೆ ಮುಗಿಸಿದ ಬಳಿಕ ಎಲ್ಲ ಕೈದಿಗಳಿರುವ ಸಾಮಾನ್ಯ ಸೆಲ್‌ನಲ್ಲಿ ನಾಗರಾಜನನ್ನು ಇರಿಸಲು ಸೂಚಿಸಿದರು.