ನೃತ್ಯ ಕಾರ್ಯಾಗಾರ ಕಲಿಕೆಗೆ ಪ್ರೇರಕ : ಎಡನೀರು ಶ್ರೀ ಅಭಿಮತ

New Project (24)
Published on

ಮಧೂರು: ಮಧೂರು ನಾಟ್ಯಮಂಟಪ ನೃತ್ಯ ಸಂಸ್ಥೆ ಎಡನೀರು ಮಠದ ಶ್ರೀ ಭಾರತಿ ಕಲಾಸದನದಲ್ಲಿ ಭರತನಾಟ್ಯ ಕಲಿಯುವ ಮಕ್ಕಳಿಗಾಗಿ ಎರಡು ದಿನಗಳ ನೃತ್ಯ ಶಿಬಿರ ಇತ್ತೀಚೆಗೆ ನಡೆಯಿತು.

ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದರು ಶಿಬಿರ ಉದ್ಘಾಟಿಸಿ ಮಾತನಾಡಿ, ಶಾಸ್ತ್ರೀಯ ಕಲೆಗಳಲ್ಲಿ ಒಂದಾದ ಭರತನಾಟ್ಯ ಕಲಿಕೆಯಲ್ಲಿ ಮಕ್ಕಳು ತೊಡಗಿಸಿಕೊಳ್ಳುವುದು ತುಂಬಾ ಒಳ್ಳೆಯ ಬೆಳವಣಿಗೆ. ಅದರಲ್ಲೂ ಇಂತಹ ನೃತ್ಯ ಕಾರ್ಯಾಗಾರಗಳು ಕಲಿಕೆಯ ಅಭಿವೃದ್ಧಿಗೆ ಪ್ರೇರಕ ಎಂದು ಹೇಳಿದರು.

ಶಿಬಿರದ ಸಂಪನ್ಮೂಲ ವ್ಯಕ್ತಿಯಾಗಿ ಪುತ್ತೂರು ನಾಟ್ಯರಂಗದ ನೃತ್ಯ ನಿರ್ದೇಶಕಿ ವಿದುಷಿ ಮಂಜುಳಾ ಸುಬ್ರಹ್ಮಣ್ಯ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಶರಣ್ಯಾ ಕಾರ್ಯಕ್ರಮ ನಿರೂಪಿಸಿದರು. ಶಿಬಿರದ ಸಂಯೋಜಕಿ ನಾಟ್ಯಮಂಟಪದ ನಿರ್ದೇಶಕಿ ಸೌಮ್ಯ ಶ್ರೀಕಾಂತ್ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net