ನಾಳೆಯಿಂದ ಗುಡ್ಡಾಪುರ ವರದಾನೇಶ್ವರಿ ಪುರಾಣ ಆರಂಭ

IMG-20240827-WA0078
Published on

ಕಲಬುರಗಿ: ಜಿಲ್ಲಾ ಬಣಗಾರ ಸಮಾಜ ಹಾಗೂ ಶ್ರೀ ಜಡೆ ಶಂಕರಲಿಂಗ ದೇವಸ್ಥಾನ ಟ್ರಸ್ಟ್ ಸಂಯುಕ್ತಾಶ್ರಯದಲ್ಲಿ ಶ್ರಾವಣ ಮಾಸದ ಅಂಗವಾಗಿ ಮಕ್ತಂಪುರದ ಶ್ರೀ ಜಡೆ ಶಂಕರಲಿಂಗ ದೇವಸ್ಥಾನದಲ್ಲಿ ಆ.೨೮ರಿಂದ ಸೆ.೭ರವರೆಗೆ ಪ್ರತಿದಿನ ಸಂಜೆ ೭ರಿಂದ ಶ್ರೀ ಗುಡ್ಡಾಪುರ ವರದಾನೇಶ್ವರಿಯ ಪುರಾಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಕಡಣಿ ಅನ್ನದಾನೇಶ್ವರಿ ಮಠದ ಶ್ರೀ ರೇವಣಸಿದ್ದೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಪುರಾಣ ಪ್ರವಚನ ಮಾಡಲಿದ್ದಾರೆ. ಗುತ್ತರಗಿ ಚನ್ನಬಸವ ಬೊಮ್ಮಾಣಿ ಸಂಗೀತ, ಸದಾನಂದ ಭಾಲ್ಕಿ ತಬಲಾ ಸಾಥ ನೀಡಲಿದ್ದಾರೆ. ಸಮಾಜ ಭಾಂದವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಸಮಾಜದ ಅಧ್ಯಕ್ಷ ಶಾಂತಪ್ಪ ಘೂಳಿ, ಟ್ರಸ್ಟ್ ಅಧ್ಯಕ್ಷ ಆನಂದ ದಂಡೋತಿ ಅವರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net