

ಬಿಡದಿ: ತಾಲೂಕಿನ ಕೆಂಚನಕುಪ್ಪೆ ಗ್ರಾಮದಲ್ಲಿ ಬಿಟ್ಟು ಬಿಡದೆ ಸುರಿಯುತ್ತಿರುವ ಮಳೆಗೆ ಬೆಂಗಳೂರು&ಮೈಸೂರು ಹೆದ್ದಾರಿಯ ಸರ್ವೀಸ್ ರಸ್ತೆಯ ಚರಂಡಿ ಕೊರೆತವಾಗಿದೆ. ಗ್ರಾಮದ ಹೊರವಲಯದಲ್ಲಿ ಬೆಂಗಳೂರು&ಮೈಸೂರು ದಶಪಥ ಹೆದ್ದಾರಿ ಹಾದು ಹೋಗಿದೆ. ಹೆದ್ದಾರಿಯ ಎರಡು ಕಡೆ ಸರ್ವಿಸ್ ರಸ್ತೆ ನಿರ್ಮಾಣವಾಗಿದೆ. ರಾಮನಗರದಿಂದ ಬೆಂಗಳೂರು ಕಡೆಗೆ ಸಂಚಾರ ಮಾಡುವ ಸರ್ವೀಸ್ ರಸ್ತೆಯ
ಪಕ್ಕದಲ್ಲಿ ಸಿಸಿ ಚರಂಡಿ ನಿರ್ಮಾಣವಾಗಿದ್ದು, ಇದೇ ಜಾಗದಲ್ಲಿ ಸಾರ್ವಜನಿಕರು ಓಡಾಡಲು ಅಂಡರ್ ಪಾಸ್ ನಿರ್ಮಾಣ ಮಾಡಲಾಗಿದೆ.
ಇದೀಗ ಮಳೆ ಬಿದ್ದ ಪರಿಣಾಮ ನೀರು ಹೆಚ್ಚಾಗಿ ಹರಿದು ಬಂದ ಕಾರಣದಿಂದಾಗಿ ಚರಂಡಿ ಮೇಲೆ ಹಾಕಿದ್ದ ಸಿಮೆಂಟ್ ಕೊಚ್ಚಿ ಹೋಗಿದೆ. ಸಿಸಿ ಚರಂಡಿಗೆ ಅಳವಡಿಕೆ ಮಾಡಿದ್ದ ಪೈಪ್ಗಳು ಕಾಣಿಸುತ್ತಿದ್ದು, ಕಂದಕವೆ ನಿರ್ಮಾಣವಾಗಿದೆ. ರಸ್ತೆ ನಿರ್ಮಾಣದ ವೇಳೆ ವೈಾನಿಕವಾಗಿ ನಿರ್ಮಾಣ ಮಾಡಿಲ್ಲ. ಮಳೆ ಬಂದರೆ ಅಂಡರ್ ಪಾಸ್ ನೀರು ತುಂಬಿಕೊಳ್ಳುತ್ತದೆ. ಅಲ್ಲದೇ ಈ ಜಾಗ ತಗ್ಗು ಪ್ರದೇಶವಾಗಿದ್ದು, ಮಳೆ ಬಂದರೆ ನೀರು ಸರಾಗವಾಗಿ ಹರಿದು ಹೋಗುವಂತೆ ಕಾಮಗಾರಿ ಮಾಡದೆ ಇರುವುದೇ ಈ ಅವಾಂತರಕ್ಕೆ ಕಾರಣವಾಗಿದೆ.