

ಸುಳ್ಯ: ತಿಂಗಳ ಹಿಂದೆ ಸುಳ್ಯ ನಗರದ ಆಸುಪಾಸಿನಲ್ಲಿ ಕೃಷಿಕರ ತೋಟಗಳಿಗೆ ನುಗ್ಗಿ ಕೃಷಿ ಹಾನಿಗೊಳಿಸಿದ್ದ ಕಾಡಾನೆಗಳು ಶನಿವಾರ ರಾತ್ರಿ ಮತ್ತೆ ಕಾಯರ್ತೋಡಿಯಲ್ಲಿ ಕೃಷಿಗೆ ಹಾನಿ ಎಸಗಿವೆ.
ಕಾಯರ್ತೋಡಿಯ ದೇವರಗುಂಡ ಡಿ.ಎಸ್.ಗಿರೀಶ್ ಅವರ ತೋಟದಲ್ಲಿ ಎರಡು ಕಾಡಾನೆಗಳು ಸುಮಾರು ಮೂವತ್ತು ಅಡಕೆ ಮರ, ಹಲವು ಬಾಳೆಗಿಡಗಳನ್ನು ಮುರಿದು ಹಾಕಿವೆ.