

ಕಿನ್ನಿಗೋಳಿ: ಪುನರೂರು ಸೇವಾನಿಧಿ ಟ್ರಸ್ಟ್‌ನ ಸೇವಾ ನಿಧಿ ಹಸ್ತಾಂತರ ಕಾರ್ಯಕ್ರಮ ಶ್ರೀಬ್ರಹ್ಮಮುಗೇರ ದೈವಸ್ಥಾನದ ಪ್ರಾಂಗಣದಲ್ಲಿ ಇತ್ತೀಚೆಗೆ ನಡೆಯಿತು.
ಶಿಮಂತೂರು ಶ್ರೀ ಶಾರದಾ ವಾದರಿ ಶಾಲೆಯ ವಿದ್ಯಾರ್ಥಿ ಲತನ್ ಬಂಗೇರ ಎಸ್.ಕೋಡಿ ಹಾಗೂ ಮೂಲ್ಕಿ ವಿಜಯ ಕಾಲೇಜಿನ ವಿದ್ಯಾರ್ಥಿನಿ ಜಯಶ್ರೀ ಎಸ್.ಕೋಡಿ ಅವರಿಗೆ ವಿದ್ಯಾರ್ಥಿ ವೇತನದ ಚೆಕ್‌ಗಳನ್ನು ಹಸ್ತಾಂತರಿಸಲಾಯಿತು.
ಸೇವಾ ನಿಧಿ ಟ್ರಸ್ಟ್ ಗೌರವಾಧ್ಯಕ್ಷ ಸುರೇಶ್ ರಾವ್ ನೀರಳಿಕೆ, ಸೇವಾನಿಧಿ ಟ್ರಸ್ಟ್ ಕಾರ್ಯದರ್ಶಿ ಗೋವರ್ಧನ್, ಟ್ರಸ್ಟಿಗಳಾದ ರವಿ ಶೆಟ್ಟಿ ಪುನರೂರು ಗುತ್ತು, ರಾಕೇಶ್ ಕೊರಗಪ್ಪ ಪುನರೂರು, ದೈವಸ್ಥಾನದ ಗುರಿಕಾರ ಮುತ್ತಪ್ಪ ಗುರಿಕಾರರು ಪುನರೂರು, ಹೇಮಾನಂದ್ ಪುನರೂರು ಹಾಗೂ ಸದಸ್ಯರು ಉಪಸ್ಥಿತರಿದ್ದರು.