

ಶಿರ್ವ: ಗುರುವಾರ ರಾತ್ರಿ ಬೀಸಿದ ಸುಳಿಗಾಳಿ ಮಳೆಗೆ ಶಿರ್ವ ಗ್ರಾಪಂ ವ್ಯಾಪ್ತಿಯ ಹಲವಾರು ಮನೆಗಳ ಹೆಂಚು ಹಾರಿವೆ. ಶಿರ್ವ ಶ್ರೀ ಸಿದ್ಧಿವಿನಾಯಕ ದೇವಸ್ಥಾನದ ದೊಡ್ಡ ನಾಲಫಲಕವೇ ಧರಾಶಾಯಿಯಾಗಿದೆ. ಬಂಟಕಲ್ಲು ಶ್ರೀ ದುರ್ಗಾಪರಮೇಶ್ವರಿ ಶಾಲೆ ಮಾಡಿನ ಮೇಲೆ ಮರದ ಗೆಲ್ಲು ಬಿದ್ದು, ಹೆಂಚು, ಸಿಮೆಂಟ್ ಶೀಟ್‌ಗಳಿಗೆ ಹಾನಿಯಾಗಿದೆ. ಶಿರ್ವ ಮಸೀದಿ ಪ್ರಾರ್ಥನಾ ಮಂದಿರದ ಸಮೀಪ ಇರುವ ವುಳೂ ಮಾಡುವ ಸ್ಥಳದ ಮೇಲ್ಛಾವಣಿ ಹಾರಿ ಹೋಗಿದೆ. ಧರ್ಮಗುರುಗಳ ಮನೆ ಮೇಲ್ಛಾವಣಿ ಹೆಂಚು ಹಾರಿದ್ದು ಮಸೀದಿ ಆಸುಪಾಸಿನ ಮನೆಗಳಿಗೆ ಅಪಾರ ಹಾನಿದೆ. ದೊಡ್ಡ ಮರಗಳು ಉರುಳಿ ಮಸೀದಿ ಸಮೀಪದ ಗೂಡಂಗಡಿ ಬಿದ್ದಿದೆ.