ಆಹೋರಾತ್ರಿ ಧರಣಿಗೆ ದಲಿತ ಸಂಘರ್ಷ ಸಮಿತಿ ಬೆಂಬಲ

ಆಹೋರಾತ್ರಿ ಧರಣಿಗೆ ದಲಿತ ಸಂಘರ್ಷ ಸಮಿತಿ ಬೆಂಬಲ
Published on

ಸಿದ್ದಾಪುರ: ವಿರಾಜಪೇಟೆ, ಸಮೀಪದ ಅಮ್ಮತ್ತಿ ಉಪ ತಹಸೀಲ್ದಾರ್ ಕಚೇರಿಯ ಮುಂದೆ ಕಳೆದ ಎಂಟು ದಿನಗಳಿಂದ ನಡೆಯುತ್ತಿರುವ ಆಹೋರಾತ್ರಿ ಧರಣಿಗೆ ದಲಿತ ಸಂಘರ್ಷ ಸಮಿತಿಗಳ ಪ್ರಮುಖರು ಬೆಂಬಲಿಸಿದ್ದಾರೆ.

ಅಮ್ಮತ್ತಿ ಹಾಗೂ ಕಾರ್ಮಾಡು ಹೋಬಳಿ ಗ್ರಾಮಗಳಲ್ಲಿ ನಿವೇಶನ ರಹಿತ ಕುಟುಂಬಗಳು ಸರ್ಕಾರಿ ಪೈಸಾರಿ ಜಾಗದಲ್ಲಿ ನಿರ್ಮಿಸಿಕೊಂಡಿರುವ ಗುಡಿಸಲು ತೆರವುಗೊಳಿಸಿರುವುದನ್ನು ಖಂಡಿಸಿ ಪ್ರತಿಭಟನೆ ನಡೆಸಲಾಗುತ್ತಿದೆ.

ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ವಿ.ಆರ್.ರಜನಿಕಾಂತ್ ಮಾತನಾಡಿ, ಅಂಬೇಡ್ಕರ್ ಅವರ ತತ್ವಗಳು ಸಿದ್ಧಾಂತಗಳನ್ನು ತಿಳಿದುಕೊಳ್ಳಬೇಕು, ಹಣದ ಆಸೆಗೆ ಮತ ಹಾಕಿ ನಮ್ಮ ಜನಾಂಗ ಬೀದಿಗಳಲ್ಲಿ ಪ್ರತಿಭಟನೆ ಮಾಡುವಂತಾಗಿದೆ. ಸಮುದಾಯವನ್ನು ಬೆಂಬಲಿಸುವವರಿಗೆ ಮತ ಚಲಾಯಿಸಬೇಕೆಂದರು.

ಕೃಷ್ಣಪ್ಪ ಬೆಳ್ಳೂರು, ಜಿಲ್ಲಾ ಸಂಚಾಲಕ ನಿತೀಶ್ ಬೆಳ್ಳೂರು, ಪೊವಣಿ, ಪಲ್ಲೆಮಾಡು ಸೇರಿದಂತೆ ದಲಿತ ಸಂಘರ್ಷ ಸಮಿತಿ ಪ್ರಮುಖ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net