ದಲಿತ ಸಂಘರ್ಷ ಸಮಿತಿ ಉದ್ಘಾಟನೆ

aruru
Published on

ಬ್ರಹ್ಮಾವರ: ದಲಿತ ಸಂಘರ್ಷ ಸಮಿತಿ, ಆರೂರು ಗ್ರಾಮ ಶಾಖೆ ಶ್ರೀ ಬಬ್ಬು ಸ್ವಾಮಿ ದೈವಸ್ಥಾನದ ಬಳಿ ಅಂಬೇಡ್ಕರ್ ಸಮುದಾಯ ಭವನದಲ್ಲಿ ಭಾನುವಾರ ಜಿಲ್ಲಾ ಪ್ರಧಾನ ಸಂಘಟನಾ ಸಂಚಾಲಕ ಮಂಜುನಾಥ್ ಗಿಳಿಯಾರು ಉದ್ಘಾಟಿಸಿದರು.

ರಾಜ್ಯ ಸಂಘಟನಾ ಸಂಚಾಲಕ ಸುಂದರ್ ಮಾಸ್ಟರ್ ಉಡುಪಿ ಅಧ್ಯಕ್ಷತೆ ವಹಿಸಿದ್ದರು. ಬ್ರಹ್ಮಾವರ ಪೊಲೀಸ್ ಠಾಣೆ ಏಎಸ್‌ಐ ಶಾಂತರಾಜ್, ಜಿಲ್ಲಾ ಸಂಘಟನಾ ಸಂಚಾಲಕ ಶಾಮ್ ರಾಜ್ ಬಿರ್ತಿ, ಆರೂರು ಗ್ರಾಪಂ ಅಧ್ಯಕ್ಷ ಗುರುರಾಜ್ ರಾವ್, ಮಾಜಿ ಅಧ್ಯಕ್ಷ ರಾಜೀವ ಕುಲಾಲ್, ತಾಲೂಕು ಸಂಚಾಲಕ ಶ್ರೀನಿವಾಸ್ ವಡ್ದರ್ಸೆ, ಗ್ರಾಪಂ ಸದಸ್ಯೆ ಪಾರ್ವತಿ, ಬಬ್ಬುಸ್ವಾಮಿ ದೇವಸ್ಥಾನದ ಮೊಕ್ತೇಸರರು, ಬೇರೆ ಜಿಲ್ಲೆ ತಾಲೂಕು ಸಂಘಟನಾ ಸಂಚಾಲಕರು ಉಪಸ್ಥಿತರಿದ್ದರು. ನರಸಿಂಹ ಸ್ವಾಗತಿಸಿದರು. ವಿಜಯ್ ವರದಿ ವಾಚಿಸಿದರು. ಭಾಸ್ಕರ್ ವಂದಿಸಿ, ಶರತ್ ರಾಜ್ ಆರೂರು ಕಾರ್ಯಕ್ರಮ ನಿರೂಪಿಸಿದರು. ಶಂಕರ್ ದಾಸ್, ತಂಡದವರಿಂದ ಹೋರಾಟದ ಗೀತೆ ಪ್ರಸ್ತುತಗೊಂಡಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net