ಸ್ಮಶಾನ ಜಾಗಕ್ಕೆ ದಲಿತರ ಪ್ರತಿಭಟನೆ

8bb87996-6316-43a2-8aaa-ac8395603130-1.jpg
Published on


ರಾಮನಗರ: ಸ್ಮಶಾನಕ್ಕೆ ಜಾಗ ನೀಡುವಂತೆ ಆಗ್ರಹಿಸಿ ಚನ್ನಪಟ್ಟಣ ತಾಲೂಕು ದೇವರಹೊಸಹಳ್ಳಿ ಗ್ರಾಮದ ದಲಿತರು ಚನ್ನಪಟ್ಟಣ ತಾಲೂಕು ಕಚೇರಿ ಮುಂದೆ ಶವ ಇರಿಸಿ ಪ್ರತಿಭಟನೆ ನಡೆಸಿದ್ದಾರೆ.

ಗ್ರಾಮದ ರಾಜೇಶ ಎಂಬ ಯುವಕ ಬುಧವಾರ ನಡೆದ ಬೈಕ್ ಅಪಘಾತದಲ್ಲಿ ಸಾವಿಗೀಡಾಗಿದ್ದ. ಮೃತಯುವಕನ ಶವ ಸಂಸ್ಕಾರ ಮಾಡಲು‌ ಕುಟುಂವದವರು ಶವವನ್ನು ಸ್ಮಶಾನಕ್ಕೆ‌ತೆಗೆದು ಕೊಂಡು ಕೆಲ ಜಮೀನಿನರ ಮಾಲೀಕರು ವಿರೋಧ ವ್ಯಕ್ತಪಡಿಸಿದ್ದಾರೆ.


ಸ್ಮಶಾನಕ್ಕೆ ಹೋಗಲು ಜಾಗವಿಲ್ಲದ‌ ಕಾರಣ ಆಕ್ತೋಶಗೊಂಡ ದೇವರಹೊಸಹಳ್ಳಿ ಗ್ರಾಮದ ‌ದಲಿತರು ಶವವನ್ನು ತಾಲೂಕು ಕಚೇರಿ ಮುಂಭಾಗಕ್ಕೆ ತಂದು , ಸ್ಮಶಾನಕ್ಕೆ ಜಾಗ ಕೊಡದಿದ್ದರೆ, ತಾಲೂಕು ಕಚೇರಿ‌ ಮುಂಭಾಗವೇ ಶವಸಂಸ್ಕಾರ ಮಾಡುವುದಾಗಿ ಪ್ರತಿಭಟನೆ ನಡೆಸಿದರು.
ತಾಲೂಕು ಕಚೇರಿಗೆ ಶವ ಮತ್ತು ಸೌಧೆಯೊಂದಿಗೆ ಆಗಮಿಸಿದ ಪ್ರತಿಭಟನಾಕಾರರು, ಜಿಲ್ಲಾಧಿಕಾರಿ ಸ್ಥಳಕ್ಕೆ ‌ಆಗಮಿಸಬೇಕು, ದೇವರಹೊಸಹಳ್ಳಿ ‌ಗ್ರಾಮದ ದಲಿತರಿಗೆ ಸ್ಮಶಾನ ಕಲ್ಪಿಸಬೇಕು ಇಲ್ಲದೆ ಹೋದರೆ ತಾಲೂಕು ಕಚೇರಿ ಆವರಣದಲ್ಲೇ ಶವಸಂಸ್ಕಾರ ಮಾಡಲಾಗುವುದು ಎಂದು ಎಚ್ಚರಿಸಿದರು.


ಪ್ರತಿಭಟನೆ‌ಹಿನ್ನೆಲೆಯಲ್ಲಿ ತಹಸೀಲ್ದಾರ್ ನರಸಿಂಹ ಮೂರ್ತಿ ದೇವರ ಹೊಸಹಳ್ಳಿ ಗ್ರಾಮಕ್ಕೆ‌ಭೇಟಿ‌ನೀಡಿ‌ ಪರಿಶೀಲನೆ ನಡೆಸಿದರು. ಸ್ಮಶಾನಕ್ಕೆ ‌ಜಾಗವಿದ್ದು ಸ್ಮಶಾನಕ್ಕೆ ಹೋಗಲು ರಸ್ತೆ ಇಲ್ಲದ ಕಾರಣ ಸಮಸ್ಯೆ ಎದುರಾಗಿದೆ. ಸಮಸ್ಯೆ ಪರಿಹರಿಸುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದಾರಾದರೂ, ಸ್ಮಶಾನಕ್ಕೆ ಜಾಗ ನೀಡುವ ವರೆಗೆ ನಾವು ಸ್ಥಳದಿಂದ ಕದಲುವುದಿಲ್ಲ ಎಂದು ಗ್ರಾಮಸ್ಥರು ತಾಲೂಕು ಕಚೇರಿ ಮುಂಭಾಗ ಪ್ರತಿಭಟನೆ ಮುಂದುವರೆಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net