

ಕಾರವಾರ: ಪರಿಶಿಷ್ಟ ಜಾತಿಗೆ ಸೇರಿದವ ಎಂದು ಹೇಳಿಕೊಂಡು ಕ್ರಿಶ್ಚಿಯನ್ ಧರ್ಮ ಪ್ರಚಾರದಲ್ಲಿ ತೊಡಗಿದ ಎಲಿಷಾ ಎಲಕಪಾಟಿ ವಿರುದ್ಧ ತನಿಖೆ ನಡೆಸಬೇಕು ಎಂದು ಜೈ ಭೀಮ್ ಮಹಾರ್ ಜನಸೇವಾ ಸಂಘದ ಸದಸ್ಯರು ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್ ಅವರಿಗೆ ಸೋಮವಾರ ಮನವಿ ಸಲ್ಲಿಸಿದರು.
ಎಲಿಷಾ ಮೂಲತಃ ಆಂಧ್ರದವರಾಗಿದ್ದು, ಹಲವು ವರ್ಷಗಳಿಂದ ಕಾರವಾರದಲ್ಲಿ ನೆಲೆಸಿದ್ದಾರೆ. ತಾನು ಪರಿಶಿಷ್ಟ ಜಾತಿಗೆ ಸೇರಿದವರ ಎಂದು ಗುತ್ತಿಗೆ ಪಡೆಯುತ್ತಿದ್ದಾರೆ.
ಅವರು ಕ್ರಿಶ್ವಿಯನ್ ಧರ್ಮ ಪ್ರಚಾರ ಮಾಡುತ್ತಿರುವ ಆರೋಪವಿದೆ. ಎಸ್‌ಸಿ ಹೆಸರಿನಲ್ಲಿ ಗುತ್ತಿಗೆ ಪಡೆಯುತ್ತಿದ್ದಾರೆ. ಈ ಬಗ್ಗೆ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.
ಇದನ್ನೂ ಓದಿ:ಸಂಘಟನೆ ಸದಸ್ಯನಿಗೆ ಮತಾಂತರವಾಗುವಂತೆ ಬೆನ್ನು ಬಿದ್ದಿದ್ದ ಎಲಿಷಾ
ಅವರು ಹಿಂದು ದೇವರನ್ನು ಅವಹೇಳನ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಉತ್ತರ ಕನ್ನಡದಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ಹಲವರು ಹಲವು ವರ್ಷಗಳಿಂದ ಹಿಂದು ಧರ್ಮವನ್ನು ಅನುಸರಿಸಿಕೊಂಡು ಬಂದಿದ್ದು. ಎಲಿಷಾ ಹೇಳಿಕೆಯಿಂದ ಭಾವನೆಗಳಿಗೆ ಧಕ್ಕೆಯಾಗಿದೆ ಎಂದಿದ್ದಾರೆ.
ಸಂಘಟನೆಯ ಸಂಸ್ಥಾಪಕ ಸುರೇಶ ಹುಲಸ್ವಾರ, ಅಧ್ಯಕ್ಷ ಶಾಂತಾರಾಮ ಹುಲಸ್ವಾರ, ಗೌರವ ಅಧ್ಯಕ್ಷ ಪ್ರದೀಪ ಹುಲಸ್ವಾರ, ಅರುಣ ಹುಲಸ್ವಾರ, ದೇವಾನಂದ ಯಾದೋಬಾ ಪರವಾರ, ನಗರಸಭೆ ಸದಸ್ಯೆ ಮಾಲಾ ಹುಲಸ್ವಾರ, ದಿನೇಶ ಪರವಾರ ಇತರರು ಇದ್ದರು.