ದಲಿತ ಜಾಗೃತಿ ಸಮಿತಿ ಪ್ರತಿಭಟನೆ

10 sep tnp 01
ಸಿದ್ದರಾಮಯ್ಯ ಅವರನ್ನು ಸಿಎಂ ಹುದ್ದೆಯಿಂದ ಕೆಳಗಿಳಿಸುವ ಹುನ್ನಾರ ಖಂಡಿಸಿ ತಿ.ನರಸೀಪುರದಲ್ಲಿ ಮಂಗಳವಾರ ಕರ್ನಾಟಕ ಪ್ರದೇಶ ದಲಿತ ಜಾಗೃತಿ ಸಮಿತಿಯ ಕಾರ್ಯಕರ್ತರು ಹಾಗೂ ಮುಖಂಡರು ಪ್ರತಿಭಟನೆ ನಡೆಸಿದರು.
Published on

ತಿ.ನರಸೀಪುರ: ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಸಲು ಕೋಮುವಾದಿಗಳು ಹುನ್ನಾರ ನಡೆಸಿದ್ದಾರೆಂದು ಆರೋಪಿಸಿ ಪಟ್ಟಣದಲ್ಲಿ ಮಂಗಳವಾರ ಕರ್ನಾಟಕ ಪ್ರದೇಶ ದಲಿತ ಜಾಗೃತಿ ಸಮಿತಿಯ ಕಾರ್ಯಕರ್ತರು ಹಾಗೂ ಮುಖಂಡರು ಪ್ರತಿಭಟನೆ ನಡೆಸಿದರು.
ಲೋಕೋಪಯೋಗಿ ಅತಿಥಿ ಗೃಹದಿಂದ ಪ್ರತಿಭಟನಾ ಮೆರವಣಿಗೆಯನ್ನು ಪ್ರಾರಂಭಿಸಿದ ಪ್ರತಿಭಟನಾಕಾರರು ರಾಜ್ಯದಲ್ಲಿ ಹಿಂದುಳಿದ, ದಮನಿತ ಸಮುದಾಯಗಳ ನಾಯಕರಾಗಿ ಆಡಳಿತ ನಡೆಸುತ್ತಿರುವುದನ್ನು ಖಂಡಿಸಿದರು.

ತಮಟೆ ನಗಾರಿಗಳನ್ನು ಬಾರಿಸುತ್ತಾ ಧಿಕ್ಕಾರ ಕೂಗುತ್ತಾ ತಾಲೂಕು ಕಚೇರಿ ಮುಂಭಾಗ ತೆರಳಿದ ಪ್ರತಿಭಟಾನಿರತರು ಕೆಲವು ತಾಸುಗಳ ಕಾಲ ಧರಣಿಯನ್ನು ನಡೆಸಿ, ಕೇಂದ್ರ ಬಿಜೆಪಿ ಸರ್ಕಾರ ಹಾಗೂ ರಾಜ್ಯಪಾಲರ ವರ್ತನೆಗೆ ಆಕ್ರೋಶ ವ್ಯಕ್ತಪಡಿಸಿದರು. ನಂತರ ತಹಸೀಲ್ದಾರ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ತಾ.ಪಂ. ಮಾಜಿ ಅಧ್ಯಕ್ಷ, ಭೂ ನ್ಯಾಯ ಮಂಡಳಿ ಸದಸ್ಯ ತುಂಬಲ ಅಂದಾನಿ ಮಾತನಾಡಿ, ಸಂವಿಧಾನದ ವಿಧೇಯ ವಿದ್ಯಾರ್ಥಿಯಾಗಿರುವ ಸಿದ್ದರಾಮಯ್ಯ ಅವರು ಪ್ರಜಾಪ್ರಭುತ್ವದ ಮೇಲೆ ನಂಬಿಕೆಯಿಟ್ಟಿರುವ ಕಳಂಕ ರಹಿತ ರಾಜಕಾರಣಿ. ಮುಡಾ ನಿವೇಶನ ಹಂಚಿಕೆಯಲ್ಲಿ ಯಾವುದೇ ಸಂಬಂಧವಿಲ್ಲದಿದ್ದರೂ ಸಿಎಂ ಹುದ್ದೆಯಿಂದ ಕೆಳಗಿಳಿಸಲು ಕೋಮುವಾದಿ ಶಕ್ತಿಯಾಗಿರುವ ಕೇಂದ್ರ ಸರ್ಕಾರ ಸಾಂವಿಧಾನಿಕ ಮಾನ್ಯತೆಯಿರುವ ರಾಜ್ಯಪಾಲರನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ಇಂತಹ ಸಂದರ್ಭದಲ್ಲಿ ಕೋಮುವಾದಿಗಳ ಹುನ್ನಾರದ ವಿರುದ್ಧ ಹೋರಾಟ ನಡೆಸಬೇಕು ಎಂದು ತಿಳಿಸಿದರು.

ದಲಿತ ಜಾಗೃತಿ ಸಮಿತಿಯ ಜಿಲ್ಲಾಧ್ಯಕ್ಷ ತುಂಬಲ ಮಂಜುನಾಥ, ತಾ.ಪಂ ಮಾಜಿ ಸದಸ್ಯ ಎಂ.ರಮೇಶ್, ಕಸಬಾ ಸಂಚಾಲಕ ಮಾಧು, ಈಶ್ವರಗೌಡನಹಳ್ಳಿ ರೇವಣ್ಣ ಮಾತನಾಡಿ, ಕೋಮುವಾದಿಗಳ ಸಂಚಿನ ವಿರುದ್ಧ ಹರಿಹಾಯ್ದರು.

ಪ್ರತಿಭಟನೆಯಲ್ಲಿ ಕುರುಬರ ಸಂಘದ ಅಧ್ಯಕ್ಷ ಎಂ.ಎಸ್.ಮಹದೇವಸ್ವಾಮಿ(ಮಹೇಶ್), ಗ್ರಾ.ಪಂ ಅಧ್ಯಕ್ಷ ರಾಮನಂಜಯ್ಯ, ಜಿಲ್ಲಾ ಕಾಂಗ್ರೆಸ್‌ನ ವೈದ್ಯರ ವಿಭಾಗದ ಅಧ್ಯಕ್ಷ ಡಾ.ಬಿ.ಪ್ರದೀಪ್, ಎಂ.ಬಿ. ಹುಂಡಿ ಗುರುಸ್ವಾಮಿ, ಮಾಜಿ ಉಪ ಪ್ರಧಾನ ಡಿ.ಆರ್.ಮೂರ್ತಿ, ಗುತ್ತಿಗೆದಾರರಾದ ಎಂ.ಎನ್. ಜಗದೀಶ್, ತುಂಬಲ ಅಭಿ, ಸಮಿತಿ ಅಧ್ಯಕ್ಷ ಪುಟ್ಟಸ್ವಾಮಿ, ಜಿಲ್ಲಾ ಸಂಚಾಲಕ ತಾಯೂರು ಮಧು, ಮುಖಂಡರಾದ ಕೃಷ್ಣಪ್ಪ, ಎಂ.ಡಿ. ಮಹದೇವಸ್ವಾಮಿ, ಚುಂಚೇಗೌಡ, ಬಿ.ಸಿದ್ದರಾಜು, ಪುಟ್ಟರಾಜು, ಎಂ.ಸೋಮಣ್ಣ, ತಿಮ್ಮೇಗೌಡ, ನಂಜುಂಡಸ್ವಾಮಿ, ನರಗ್ಯಾತನಹಳ್ಳಿ ನಂಜಯ್ಯ, ಮಹದೇವಮ್ಮ, ರೇವಣ್ಣ, ಪದ್ಮ ನಿಂಗಪ್ಪ ಹಾಗೂ ಇನ್ನಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net